ಚಿಕ್ಕಮಗಳೂರು : ಅಕ್ರಮವಾಗಿ ಗೋಮಾಂಸ ದಂಧೆ ನಡೆಸುವವರಿಗೆ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ...
ಹೌದು, ಇಂದು ತಮಿಳು ಕಾಲೋನಿ ಬಳಿ ಅಕ್ರಮವಾಗಿ ಗೋಮಾಂಸ ದಂಧೆ ನಡೆಸಲು ನಿರ್ಮಾಣ ಮಾಡಿದ್ದ ಶೆಡ್ಗಳ ಮೇಲೆ ನಗರಸಭೆ ತಂಡದ ಸಿಬ್ಬಂದಿಗಳು ದಾಳಿ ಮಾಡಿದ್ದು ; ಇದೇ ವೇಳೆ ಅಕ್ರಮ ಚಟುವಟಿಕೆಗಳು ನಡೆಯುವ ಜಾಗಗಳ ಮೇಲೆ ಇನ್ನುಮುಂದೆ ದಾಳಿ ನಡೆಸಿ ಅಕ್ರಮಗಳಿಗೆ ಲಗಾಮ್ ಹಾಕಲಾಗುವುದು..
ಮಾತ್ರವಲ್ಲ ಅಕ್ರಮವಾಗಿ ತಲೆಯೆತ್ತಿರುವ ಗೋಕಟ್ಟಡಗಳನ್ನು ದ್ವಂಸ ಮಾಡುವ ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ನಗರಸಭೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ...
Sign up here to get the latest post directly to your inbox.