ನಮ್ಮ ದೇಹಕ್ಕೆ ಬರುವ ಹಲವು ರೋಗಗಳಿಗೆ ನಾವು ಸೇವಿಸುವ ಆಹಾರವೇ ಮನೆಮದ್ದಾಗಿರುತ್ತದೆ.ಈಗಿನ ಕಾಲದಲ್ಲಿ ಸಾಮಾನ್ಯವಾಗಿರುವ ಕಿಡ್ನಿ ಸ್ಟೋನ್ ಕಾಯಿಲೆಗೆ ನಮ್ಮ ಸನಾತನ ಆಹಾರ ಪದ್ದತಿಯಲ್ಲಿ ಮದ್ದು ಇತ್ತು ಅದು ಯಾವುದು ಗೊತ್ತಾ? ಬನ್ನಿ ತಿಳಿಯೋಣ...
ಹೌದು, ಕಿಡ್ನಿಯಲ್ಲಿ ಆಗುವಂತಹ ಕಲ್ಲನ್ನು ಕರಗಿಸಲು ಬಾಳೆದಿಂಡು ತುಂಬಾ ಸಹಕಾರಿ ; ಇಂದಿನ ಗಡಿಬಿಡಿಯ ಜೀವನ ಶೈಲಿಯಲ್ಲಿ ನಮ್ಮ ದೇಹದಲ್ಲಿರುವ ಅಂಗಾಂಗಳ ಕುರಿತು ಕಾಳಜಿವಹಿಸದಿರುವುದೇ ಈಗೀಗ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಗಣನೀಯವಾಗಿ ಹೆಚ್ಚಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು..
ಇನ್ನೂ ದಿನನಿತ್ಯದ ಆಹಾರದಲ್ಲಿ ಬಾಳೆದಿಂಡನ್ನು ಸೇವನೆ ಮಾಡುವುದರಿಂದ ಕಿಡ್ನಿ ಸಮಸ್ಯೆ ನಿವಾರಣೆ ಕ್ರಮೇಣವಾಗಿ ಕಡಿಮೆ ಆಗುತ್ತದೆ... ಹೇಗಪ್ಪಾ ಈ ಬಾಳೆದಿಂಡನ್ನು ಆಹಾರದಲ್ಲಿ ಬಳಸುವುದು ಅಂತಿರಾ ? ಹಾಗಿದ್ದರೆ ನಿಮ್ಮ ಮನೆಯಲ್ಲಿ ಎಲ್ಲಾ ವಯೋಮಾನದ ಜನರಿಗೆ ಇಷ್ಟವಾಗುವಂತಹ ಒಂದು ಬಾಳೆದಿಂಡಿನ ರೆಸಿಪಿ ಇಲ್ಲಿದೆ..
ಬಾಳೆದಿಂಡಿನ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು :-
ಬಾಳೆದಿಂಡು, ಕಡಲೇಬೇಳೆ,ತುರಿದ ತೆಂಗಿನಕಾಯಿ,ಹಸಿಮೆಣಸಿನ ಕಾಯಿ,ಒಣಮೆಣಸಿನ ಕಾಯಿ,ಬೆಲ್ಲ ಸ್ವಲ್ಪ ಹುಣಸೆಹಣ್ಣಿನ ರಸ ಉಪ್ಪು ರುಚಿಗೆ ಒಗ್ಗರಣೆಗೆ ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು...
ಬಾಳೆದಿಂಡಿನ ಪಲ್ಯವನ್ನು ಮಾಡುವ ವಿಧಾನ :-
ಮೊದಲಿಗೆ ಒಂದು ಕುಕ್ಕರ್ ಅಥವಾ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಣಮೆಣಸಿನಕಾಯಿ,ಕಡಲೆಬೇಳೆ ಮತ್ತು ಬಾಳೆದಿಂಡನ್ನು ಹಾಕಿ ಬೇಯಿಸಿಕೊಳ್ಳಿ..ನಂತರ ಒಂದು ಮಿಕ್ಸಿಯಲ್ಲಿ ಸಾಸಿವೆ, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ.
ನಂತರ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ಬೆಲ್ಲ ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಹುರಿಯಬೇಕು, ಆಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ಆರೋಗ್ಯಕರವಾದ ಬಾಳೆದಿಂಡಿನ ಪಲ್ಯ ಸಿದ್ದವಾಗುತ್ತದೆ...
ಒಟ್ಟಾರೆ ಹೇಳುವುದಾದರೆ , ಬಾಳೆದಿಂಡನ್ನು ಪಲ್ಯ , ಜ್ಯೂಸ್ ಮುಂತಾದ ವಿಧಾಗಳ ಮೂಲಕ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಆಗಿರುವುದನ್ನು ಕರಗಿಸುವುದು ಮಾತ್ರವಲ್ಲ ಕಿಡ್ನಿ ಸಮಸ್ಯೆ ಬಾರದಂತೆಯು ತಡೆಗಟ್ಟಬಹುದು. ನಿಮ್ಮ ದಿನ ಆರೋಗ್ಯವಾಗಿರಲಿ ನಮಸ್ಕಾರಗಳು...
Sign up here to get the latest post directly to your inbox.