ಸರ್ಕಾರದ ಗಾಡಿ,ಸರ್ಕಾರದ ಲೋಗೋ ಇದೆ ಆದರೆ ರೂಲ್ಸ್ ಮಾತ್ರ ಒಂದಿಷ್ಟು ಪಾಲಿಸಿಲ್ಲ...
ಹೌದು, ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಬಳಿ ಸರ್ಕಾರದ ಲೋಗೋ ಇರುವ ಬೆಂಗಳೂರಿನ ಕೆಎ 02 ಎಮ್ ಎಮ್ 6627 ಇನ್ನೋವಾ ಕಾರೊಂದು ಸಂಚಾರ ಮಾಡುವಾಗ ಸ್ಥಳೀಯರು ಸರ್ಕಾರಿ ಕಾರು ಇನ್ಸುರೆನ್ಸ್ ಇಲ್ಲದೇ ರಸ್ತೆಯಲ್ಲಿ ರಾಜಾರೋಷವಾಗಿ ಚಲಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ..
ಅಷ್ಟೇ ಅಲ್ಲದೆ ಸ್ಥಳೀಯರು ಮೊಬೈಲ್ನಲ್ಲಿ ಪರೀಕ್ಷಿಸಿದಾಗ ಈ ಕಾರು ರಿಜಿಸ್ಟ್ರೇಷನ್ ಆಗಿರೋದು 2017ರಲ್ಲಿ. 2018ರಲ್ಲೇ ಇನ್ಸುರೆನ್ಸ್ ಮುಗಿದಿದೆ. ನಾಲ್ಕು ವರ್ಷದಿಂದ ಇನ್ಸುರೆನ್ಸ್ ಇಲ್ಲದೆ ಓಡಾಡುತ್ತಿದೆ. 2022ರಲ್ಲಿ ಈ ಗಾಡಿಯನ್ನ ಜ್ಞಾನಭಾರತಿ ಆರ್.ಟಿ.ಓ. ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಿದೆ ಎಂಬ ಮಾಹಿತಿ ಬಯಲಿಗೆ ಬಂದಿದೆ...
ಇಷ್ಟಕ್ಕೆ ಸುಮ್ಮನಿರದ ಸಾರ್ವಜನಿಕರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದು ; ಸಾಮಾನ್ಯ ಜನರ ವಾಹನ ಸಂಚಾರಕ್ಕೆ ನೂರಾರು ನಿಯಮ ಹೇರುವ ಸಂಚಾರಿ ಇಲಾಖೆ ಸರ್ಕಾರದ ವಾಹನಗಳ ಕುರಿತು ಜಾಣಕುರುಡನಂತೆ ವರ್ತಿಸುತ್ತಿದೆಯಾ ಎಂದು ಲೇವಡಿ ಮಾಡಿದ್ದಾರೆ...
Sign up here to get the latest post directly to your inbox.