ಪ್ರತಿದಿನ ಸೇವಿಸಿ ಆರೋಗ್ಯವರ್ಧಕ ಪುದೀನಾ..!

Sun, Jun 05, 2022


ಭಾರತೀಯ ಆಹಾರ ಪದ್ದತಿಯಲ್ಲಿ ಔಷದೀಯ ಅಂಶಗಳು ಅಡಕವಾಗಿರುವ ಕಾರಣದಿದಲೇ ಭಾರತೀಯರ ಆಹಾರ ಪದ್ಧತಿ ಪ್ರಪಂಚದಲ್ಲಿ  ಅಗ್ರಸ್ಥಾನ ಪಡೆದಿರುವುದು...

ಇಂತಹ ಆಹಾರಪದ್ದತಿಯಲ್ಲಿ ಸೇರಲ್ಪಟ್ಟಿರುವ  ಸುಗಂಧಭರಿತ ಮೂಲಿಕೆಯೇ ಪುದೀನಾ ; ಇದರಲ್ಲಿರುವ  ಔಷದೀಯ ಗುಣಗಳು ಮತ್ತು ಪೌಷ್ಟಿಕಾಂಶಗಳು ನಾವೆಲ್ಲರೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಉಪಯುಕ್ತವಾಗಿದೆ..ಹೀಗಾಗಿ ಆರೋಗ್ಯ ವೃದ್ದಿಸುವ ಪುದೀನಾ ಸೊಪ್ಪಿನ ಬಗ್ಗೆ  ಈ  ಸಂಚಿಕೆಯಲ್ಲಿ ತಿಳಿಯೋಣ  ಬನ್ನಿ...


ಪುದೀನಾ ಸೊಪ್ಪಿನಲ್ಲಿರುವ ಪೌಷ್ಟಿಕಾಂಶದ  ವಿವರಗಳು :-

1.  ಈ ಗಿಡ ಮೂಲಿಕೆಯು ಫೈಟೋನ್ಯೂಟ್ರಿಯಂಟ್  ಮತ್ತು  ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿರುತ್ತದೆ..

2. ವಿಟಮಿನ್ A, B, ಮತ್ತು C ,ಫಾಸ್ಪರಸ್, ಕ್ಯಾಲ್ಶಿಯಂ ಇತ್ಯಾದಿಗಳ ಸಮುಚ್ಛಯದಿಂದ  ತುಂಬಿಕೊಂಡಿದೆ..

3. ಕಬ್ಬಿಣ, ಪೊಟ್ಯಾಶಿಯಂ, ಮತ್ತು ಮ್ಯಾಂಗನೀಸ್ ನ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ..

4. ಕಡಿಮೆ ಕ್ಯಾಲೋರಿ ಮತ್ತು ಕನಿಷ್ಠ ಪ್ರಮಾಣದ  ಪ್ರೋಟೀನ್ ಮತ್ತು  ಕೊಬ್ಬನ್ನು ಹೊಂದಿದೆ...


ಪುದೀನಾ ಸೊಪ್ಪಿನ ಸೇವನೆಯಿಂದ ದೇಹಕ್ಕೆ  ನಾವು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು... ಅದು ಹೇಗೆ  ಅಂತೀರಾ ? ತಿಳಿಯೋಣ ಬನ್ನಿ....

1. ಪುದೀನಾ ಸೇವನೆ ಅಜೀರ್ಣ ಸಮಸ್ಯೆಗೆ ರಾಮಬಾಣ :- 

ಹೌದು,  ಈ ಗಿಡ ಮೂಲಿಕೆಯು  ಯತೇಚ್ಛವಾಗಿ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸುವುದರಿಂದ  ಪುದೀನಾ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ಸೋಂಕಿನ ನಿವಾರಣೆಗೆ ಇದು ರಾಮಬಾಣವಾಗಿದೆ...

2 . ಕರುಳಿನಸಮಸ್ಯೆ ನಿವಾರಣೆ :- 

ಪುದೀನಾ ಸೇವನೆ ಜೀರ್ಣಾಂಗವ್ಯೂಹದ ಸ್ನಾಯುಗಳ ಮೇಲೆ ವಿಶ್ರಾಂತಿ ಪರಿಣಾಮ ನೀಡುತ್ತದೆ ಮಾತ್ರವಲ್ಲ ; ಮಲಬದ್ಧತೆ, ಅತಿಸಾರದ ಸಮಸ್ಯೆಯನ್ನು ನಿವಾರಿಸುತ್ತದೆ...

3.ಉಸಿರಾಟದ ತೊಂದರೆ ನಿವಾರಣೆ :-

ನಾಸಿಕ ದಟ್ಟಣೆ, ಎದೆಯ ದಟ್ಟಣೆ ಸೇರಿದಂತೆ ಮುಖ್ಯವಾಗಿ ಅಸ್ತಮಾ ರೋಗಿಗಳಿಗೆ ಚಿಕಿತ್ಸಾಕಾರಿಯಾಗಿ ಈ ಮೂಲಿಕೆ ಕಾರ್ಯನಿರ್ವಹಿಸುತ್ತದೆ...

4. ಓರಲ್ ಕೇರ್ :-

ಪುದೀನಾ ಎಲೆಗಳ ಸಾರವು ಹಲ್ಲುಗಳ ಮೇಲೆ ಶೇಖರಣೆ ಆಗುವ ಪ್ಲೇಕ್ ಗಳನ್ನು ತೆರವುಗೊಳಿಸುತ್ತದೆ..


5. ಪುದೀನಾ ಸೇವನೆ ಒತ್ತಡ ಮತ್ತು ಖಿನ್ನತೆಯನ್ನು ದೂರಮಾಡಿ ಚೈತನ್ಯ ಮೂಡಲು ಸಹಕಾರ ನೀಡುತ್ತದೆ...

6. ಕಡಿಮೆ ಕೊಬ್ಬಿನ ಅಂಶ ಹೊಂದಿರುವ ಈ ಗಿಡಮೂಲಿಕೆ  ತೂಕ ಇಳಿಸಲು ಸಹಕಾರಿ...

7. ವಿಟಮಿನ್ C ಹೊಂದಿರುವ ಪುದೀನಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಲರ್ಜಿ ಸಮಸ್ಯೆಗೆ  ಪರಿಣಾಮಕಾರಿ ಮನೆಮದ್ದಾಗಿದೆ...

8.ಪೌಷ್ಟಿಕಾಂಶಗಳ ಖಜಾನೆ ಎಂದು ಕರೆಯಲ್ಪಡುವ ಪುದೀನಾ  ಆರೋಗ್ಯಕರ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ...


ಒಟ್ಟಾರೆ ಹೇಳುವುದಾದರೆ ; ನೀವು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಇಚ್ಛಿಸಿದ್ದಲ್ಲಿ ಪ್ರತಿನಿತ್ಯ ಬಹುಪಕಾರಿಯಾದ ಪುದೀನಾ ಗಿಡಮೂಲಿಕೆಯನ್ನು    ಬಳಸುವ ಮೂಲಕ ಆರೊಗ್ಯವಾಗಿರಿ, ನಮಸ್ಕಾರಗಳು...


Like our news?