ಸಿಸಿಬಿ ದಾಳಿ : ಪರಪ್ಪನ ಅಗ್ರಹಾರ ಖೈದಿಗಳಿಂದ ಗಾಂಜಾ ಸೇರಿದಂತೆ ಮೊಬೈಲ್ ವಶ..!

Tue, Nov 30, 2021

ಬೆಂಗಳೂರು : ಅಕ್ರಮ ಚಟುವಟಿಕೆ   ಹಿನ್ನೆಲೆಯಲ್ಲಿ  ಪರಪ್ಪನ ಅಗ್ರಹಾರ ಜೈಲಿನ ಮೇಲೆ ಇಂದು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ...


ಹೌದು, ಜೈಲಿನಲ್ಲಿ ನಡೆಯುತ್ತಿರುವ  ಅಕ್ರಮ ಚಟುವಟಿಕೆಗಳ ಕುರಿತು ಬಂದ ದೂರಿನನ್ವಯ  ಇಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ...


ಈ ವೇಳೆ ಅಕ್ರಮವಾಗಿ ಖೈದಿಗಳು ಬಳಸುತ್ತಿದ್ದ ಅಪಾರ ಪ್ರಮಾಣದ ಗಾಂಜಾ ಸೇರಿದಂತೆ ಮೊಬೈಲ್, ಪೆನ್ಡ್ರೈವ್, ಹಣ ಇತರೆ ವಸ್ತುಗಳನ್ನು  ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ...

Like our news?