ಬೆಳಗಾವಿಯ ಶಿಕ್ಷಕಿ ಅಂದ್ಲು ಪಾಕಿಸ್ತಾನ ಜಿಂದಾಬಾದ್; ಮುಂದಾಗಿದ್ದು ಏನು ಗೊತ್ತಾ.... Bellgavi#lady arrested....

Sun, Feb 17, 2019

ಬೆಳಗಾವಿ : ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರಿಗಾಗಿ ದೇಶವೇ ಕಣ್ಣೀರಿನಲ್ಲಿ ಮುಳುಗಿದೆ. ಇಡೀ ಪ್ರಪಂಚವೇ ಭಾರತದ ಬೆಂಬಲಕ್ಕೆ ನಿಂತಿದೆ. ಆದರೆ ನಮ್ಮ ನಡುವಿನ ವಿಕೃತ ಮನಸ್ಸುಗಳು ನಮ್ಮ ನಡುವೆ ಹುಳಿ ಹಿಂಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಮ್ಮದೇ ರಾಜ್ಯದಲ್ಲೇ ದೇಶವೇ ಅವಮಾನ ಪಡುವಂತಹ ಘಟನೆ ನಡೆದಿದ್ದು ಅದಕ್ಕೆ ಜನತೆ ಸರಿಯಾದ ಶಿಕ್ಷೆ ನೀಡಿದ್ದಾರೆ ಕೂಡಾ. ಬೆಳಗಾವಿಯ ಖಾಸಗಿ‌ ಶಾಲೆಯ ಶಿಕ್ಷಕಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ್​ ಜಿಂದಾಬಾದ್​ ಅಂತಾ ಪೋಸ್ಟ್​ ಹಾಕಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.


ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪುರ ಗ್ರಾಮದ ಶಿಕ್ಷಕಿಯೊಬ್ಬರು ದೇಶದ್ರೋಹದ ಕೃತ್ಯ ಎಸಗಿದ್ದು ಫೇಸ್​ಬುಕ್​ ಹಾಗೂ ವಾಟ್ಸಪ್ ಸ್ಟೇಟಸ್​ನಲ್ಲಿ‌ ಪಾಕಿಸ್ತಾನ್​ ಜಿಂದಾಬಾದ್,‌ ಪಾಕಿಸ್ತಾನ್​ ಕೀ ಜೈ ಎಂದು ಬರೆದುಕೊಂಡಿದ್ದಳು. ಅಲ್ಲದೇ ಜೈ‌ ಪಾಕಿಸ್ತಾನ ಎಂಬ ಅಕ್ಷರ‌ ಇರುವ ಇಮೇಜ್​ಅನ್ನು ವಾಟ್ಸಪ್ ಡಿಪಿಯಲ್ಲಿ ಇಟ್ಟುಕೊಂಡಿದ್ದಾಳೆ ಎನ್ನಲಾಗಿದೆ.

ಶಿಕ್ಷಕಿ ವರ್ತನೆಗೆ ಗ್ರಾಮದ ಯುವಕರು ಅಸಮಾಧಾನ ‌ವ್ಯಕ್ತಪಡಿಸಿದ್ದಾರೆ. ಅಲ್ಲದೇ‌ ಶಿಕ್ಷಕಿ ಮನೆ ಮೇಲೆ‌ ಕಲ್ಲು ತೂರಿ,‌ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯರಗಟ್ಟಿಯಲ್ಲಿ ನೂರಾರು ಜನರು 2 ಗಂಟೆ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಮುರಗೋಡ ಠಾಣೆಯ ಪೊಲೀಸರು ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ‌ನಿರ್ಮಾಣವಾಗಿದೆ. ಶಿಕ್ಷಕಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂಬ ಬಲವಾದ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ…

Like our news?
Copyrights

*