ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ : ದರ್ಶನ ಸಮಯದಲ್ಲಿ ಬದಲಾವಣೆ..!

Thu, Oct 28, 2021

ಧರ್ಮಸ್ಥಳ : ದೀಪಾವಳಿ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ  ವಿಶೇಷ ಪೂಜೆ, ಉತ್ಸವಾದಿ ಸೇವೆಗಳು ನಡೆಯುವ ಕಾರಣ ದೇವರ ದರ್ಶನಕ್ಕೆ ಸಮಯಾವಕಾಶ ಹೊಂದಿಸಲಾಗಿದೆ..


ಹೌದು,ನವೆಂಬರ್ 4 ರ ನಂತರ ರಂಗಪೂಜೆ, ಬೆಳ್ಳಿ ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷಪೂಜೆ, ಉತ್ಸವಾದಿ ಸೇವೆಗಳು ಆರಂಭವಾಗಲಿವ ಕಾರಣ ; ವಿಶೇಷ ದಿನಗಳಲ್ಲಿ ಸಮಯ ವ್ಯತ್ಯಾಸವಾಗುವ ಸಾಧ್ಯತೆಯಿದ್ದು ; ಭಕ್ತಾದಿಗಳು ಸಹಕರಿಸಬೇಕೆಂದು ಎಂದು ದೇವಸ್ಥಾನ ಸಮಿತಿ ಸಿಬ್ಬಂದಿ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ...

ಬೆಳಗ್ಗೆ 6ರಿಂದ ಅಪರಾಹ್ನ 2.30, ಸಂಜೆ 5ರಿಂದ ರಾತ್ರಿ 8.30ರ ವರೆಗೆ ಅನ್ನಪೂರ್ಣ ಛತ್ರದಲ್ಲಿ ಬೆಳಗ್ಗೆ 10.30ರಿಂದ 3 ಹಾಗೂ ರಾತ್ರಿ 7ರಿಂದ 9ರ ವರೆಗೆ ಭಕ್ತರಿಗೆ ಊಟದ ವ್ಯವಸ್ಥೆ ಇರಲಿದೆ..ಬೀಡಿನಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೆಳಗ್ಗೆ 9ರಿಂದ 12, ಸಂಜೆ 4ರಿಂದ 5 ಹಾಗೂ ರಾತ್ರಿ 7ರಿಂದ 9ರ ವರೆಗೆ ಭೇಟಿ ಮಾಡಬಹುದು ಎಂದು ದೇವಸ್ಥಾನ ಸಮಿತಿ ಸಿಬ್ಬಂದಿ ತಿಳಿಸಿದ್ದಾರೆ...

Like our news?