ಹೆಣ್ಣು ಮಗು ಎಂದು ಬಸ್ ನಿಲ್ದಾಣದಲ್ಲಿ ಮಗು ಮಲಗಿಸಿ ಪರಾರಿಯಾದ ತಾಯಿ..!

Thu, Sep 09, 2021

ವಿಜಯಪುರ : ಮೂರ ರಿಂದ ನಾಲ್ಕು ತಿಂಗಳುಗಳ ಹಸೂಗೂಸನ್ನು ತಾಯಿ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿರುವ ಮನಕಲುಕುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.


ಬಸ್ ನಿಲ್ದಾಣದಲ್ಲಿ‌ ಪಕ್ಕದಲ್ಲಿ ಕುಳಿತಿರುವವರಿಗೆ ಶೌಚಾಲಯಕ್ಕೆ ಹೋಗಿ ಬರುವದಾಗಿ ಹೇಳಿ, ಬಸ್ ನಿಲ್ದಾಣದ ಮಳಿಗೆಯ ಮುಂಭಾಗದಲ್ಲಿ ನೀಲಿ ದುಪ್ಪಟ್ಟಾದಲ್ಲಿ ಮಗುವನ್ನು ಸುತ್ತಿನೆಲದ ಮೇಲೆ ಮಲಗಿಸಿ  ತಾಯಿ ಪರಾರಿಯಾಗಿದ್ದಾಳೆ, ಸ್ಥಳಿಯರು ಮಗುವನ್ನು ನೋಡಿ ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆ ಸ್ಥಳಕ್ಕೆ ಬಂದ ಪೋಲಿಸರು ಮಗುವನ್ನು ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ...

Like our news?