ವಿಜಯಪುರ ಜಿಲ್ಲಾ ಪೋಲೀಸರ ಕಾರ್ಯಾಚರಣೆ 7 ಜನ ಅಂತರಜಿಲ್ಲಾ ಮನೆಗಳ್ಳರು ಅಂಧರ್..!

Thu, Sep 09, 2021

ವಿಜಯಪುರ : ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ  ಏಳು ಜನ ಮನೆಗಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್ ತಿಳಿಸಿದ್ದಾರೆ.


ರಮೇಶ ಕಾಳೆ , ಸುರೇಶ ಚವ್ಹಾಣ , ಪರಶುರಾಮ ಕಾಳೆ , ಕಿರಣ ಬೇಡಕೇರ , ದೇವದಾಸ್ ಚವ್ಹಾಣ , ತನ್ವೀರ್ ಹೊನ್ನುಟಗಿ, ದಶರಥ ಹೊಸಮನಿ ಬಂಧಿತರು.


ಇನ್ನೂ ಬಂಧಿತರಿಂದ 16 ಲಕ್ಷ ಮೌಲ್ಯದ 360 ಗ್ರಾಂ ಚಿನ್ನ , 200 ಗ್ರಾಂ ಬೆಳ್ಳಿ , ಒಂದು ಬೊಲೇರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ , ಈ ಕುರಿತು ಹಲವು ಪೊಲೀಸ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಈ ಮನೆಗಳ್ಳತನ ಪ್ರಕರಣ ಭೇಧಿಸಿದ ಪೋಲಿಸ್ ತಂಡದ ಕಾರ್ಯ ವೈಖರಿಯನ್ನು ವಿಜಯಪುರ ಎಸ್ಪಿ ಎಚ್. ಡಿ ಆನಂದಕುಮಾರ ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

Like our news?