ಮೊಬೈಲ್ ಅಂಗಡಿ ಕಳ್ಳತನ - ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!

Wed, Sep 08, 2021

ವಿಜಯಪುರ : ಮೊಬೈಲ್ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕಾಲೇಜ್ ರಸ್ತೆಯಲ್ಲಿರುವ ಹಿರೇಮಠ ಮೊಬೈಲ್ಸ್ ಅಂಗಡಿಯಲ್ಲಿ ನಡೆದಿದೆ.


ಹೌದು ನಿನ್ನೆ ತಡ ರಾತ್ರಿ ಸುಮಾರು‌ 1 ರಿಂದ 2 ಗಂಟೆಯ ಸಮಯದಲ್ಲಿ ಕಳ್ಳತನ ನಡೆದಿದ್ದು, ಪ್ರವೀಣ ಹೋಬ್ಳಾ‌ ಎಂಬುವರಿಗೆ ಸೇರಿದ ಅಂಗಡಿಯಲ್ಲಿನ 21 ಸಾವಿರ ರೂಪಾಯಿ ನಗದು, 1 ಕಂಪ್ಯೂಟರ್ ಹೋಮ್ ಥೇಟರ್ ಸ್ಪೀಕರ್ಸ್, 3 ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ... ಇಬ್ಬರು ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Like our news?