ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರದ ಅನುಮತಿ ; ಇಲ್ಲಿದೆ ನೋಡಿ ಸರ್ಕಾರದ ಗೈಡಲೈನ್ಸ್..!

Sun, Sep 05, 2021

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಸಭೆ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಈ ಬಾರಿ 5 ದಿನಗಳ ಕಾಲ ಸರಳವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಲು ನಿರ್ದರಿಸಲಾಗಿದೆ ಎಂದು ತಿಳಿಸಿದ್ದರು , ಅದರಲ್ಲಿ ಕೆಲ ನಿರ್ಧಾರಗಳನ್ನು ಬಹಿರಂಗ ಪಡಿಸಿದ್ದರು ಈದೀಗ ಸರ್ಕಾರ ನಿಗದಿ ಪಡಿಸಿದ  ಗೈಡಲೈನ್ಸ್ ಬಿಡುಗಡೆಯಾಗಿದ್ದು ಇಲ್ಲಿದೆ ನೋಡಿ....


 ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳ ಗೈಡ್ ಲೈನ್ಸ್...

◆  ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ...

◆ ಗಣೇಶೋತ್ಸವ ಸಂಘಟಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು...

◆ ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ವ್ಯಾಕ್ಸಿನೇಷನ್ ಅಭಿಯಾನ...

◆ ನಗರ ಪ್ರದೇಶಗಳಲ್ಲಿ ವಾರ್ಡ್ ಗೆ 1ರಂತೆ ಮೂರ್ತಿ ಪ್ರತಿಷ್ಠಾಪಿಸಬಹುದು...

◆ ಗ್ರಾಮೀಣ ಅಥವಾ ಹಳ್ಳಿಗಳಲ್ಲಿ ಸ್ಥಳೀಯಾಡಳಿತದಿಂದ ಷರತ್ತುಗಳ ನಿರ್ಧಾರ...

◆ 50X50 ವಿಸ್ತೀರ್ಣದ ಪೆಂಡಾಲ್ ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ...

◆ ಯಾವುದೇ ಮನರಂಜನಾ ಕಾರ್ಯಕ್ರಮ, ಡಿಜೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ...

◆ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ...

◆ ಸರ್ಕಾರಿ ಹಾಗೂ ಖಾಲಿ ಜಾಗಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು...

◆ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ, ವಾದ್ಯಗಳಿಗೆ ನಿರ್ಬಂಧ...

◆ ನಿಗದಿತ ಸದಸ್ಯರಿಂದ ಮಾತ್ರ ನಿಗದಿತ ಸ್ಥಳಗಳಲ್ಲಿ ವಿಸರ್ಜನೆ...

◆ ಹಳ್ಳಿಗಳಲ್ಲಿ ಕೆರೆಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ...

◆ ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಗಡಿ ಜಿಲ್ಲೆಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ..

 ಶಾಲಾ-ಕಾಲೇಜುಗಳಲ್ಲಿ ಗಣಪತಿ ಕೂರಿಸುವಂತಿಲ್ಲ...

Like our news?