ಬೆಲೆ ಏರಿಕೆ ಖಂಡಿಸಿ ಕೈ-ಕಾರ್ಯಕರ್ತರ ವಿಭಿನ್ನ ಪ್ರತಿಭಟನೆ..!

Sat, Sep 04, 2021


ವಿಜಯಪುರ : ಗ್ಯಾಸ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗಿರುವ ಹಿನ್ನಲೆಯಲ್ಲಿ  ಕೇಂದ್ರ ಸರ್ಕಾರದ ವಿರುದ್ಧ ವಿಜಯಪುರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ರಸ್ತೆಯ ಮೇಲೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. 


ಕೇಂದ್ರ ಸರ್ಕಾರ ಪ್ರತಿನಿತ್ಯ ಜನ ಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ದೈನಂದಿನ ಬದುಕಿಗೆ ಬೇಕಿರುವ ಅಡುಗೆ ಗ್ಯಾಸ್ , ಬೆಳೆ ಕಾಳುಗಳು , ಅಡುಗೆ ಎಣ್ಣೆ , ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುತ್ತಿದೆ, ಇದರಿಂದ ಜನ ಸಾಮಾನ್ಯರ ಬದುಕು ಸಾಗಿಸುವುದು ಕಠಿಣವಾಗಿದೆ ಅದಕ್ಕಾಗಿ ತಕ್ಷಣವೇ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು...

Like our news?