ಗಾಂಜಾ ಮಾರಾಟ - ಓರ್ವನ ಬಂಧನ..!

Sat, Sep 04, 2021

ವಿಜಯಪುರ : ಅಕ್ರಮವಾಗಿ ಬೈಕಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪೂರ ಗ್ರಾಮದಲ್ಲಿ ನಡೆದಿದೆ. 


ಅಮೋಘಸಿದ್ದ ಯಮನಪ್ಪ ಲೋಗಾಂವಿ ಬಂಧಿತ ಆರೋಪಿ. 


ಆರೋಪಿಯಿಂದ ನಾಲ್ಕು ಕೇಜಿ ಒಣ ಗಾಂಜಾ ಹಾಗೂ ಒಂದು ಬೈಕ್ ನ್ನು ಅಬಕಾರಿ ಪೊಲೀಸ ವಶಕ್ಕೆ ಪಡೆದುಕೊಂಡಿದ್ದು , ಗಾಂಜಾ ಹಾಗೂ ಬೈಕ್ ಸೇರಿ ಒಟ್ಟು ಒಂದು ಲಕ್ಷದ ಹತ್ತು ಸಾವಿರ ಮೌಲ್ಯದ ವಸ್ತುಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು. 

ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ವಿಜಯಪುರ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Like our news?