ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಗೋವಿಂದ ಕಾರಜೋಳ..!

Thu, Sep 02, 2021

ವಿಜಯಪುರ : ವಿಜಯಪುರ ತಾಲೂಕಿನ ಮದಭಾವಿ ಬುರಣಾಪುರ ಗ್ರಾಮದ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು  ಸಚಿವ ಗೋವಿಂದ ಕಾರಜೋಳ ಪರೀಶಿಲನೆ ನಡೆಸಿದರು.


ವಿಮಾನ ನಿಲ್ದಾಣ ಪರಿಶೀಲನೆ ಬಳಿಕ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು.


ವಿಜಯಪುರಕ್ಕೆ ವಿಮಾನ ನಿಲ್ದಾಣಕ್ಕೆ ಆಗಬೇಕು ಎಂಬ ಬೇಡಿಕೆ ಇತ್ತು ನಾನು 1976 ರಿಂದಲೇ ಈ ಕುರಿತು ಪ್ರಯತ್ನ ಮಾಡುತ್ತಿದ್ದೆ ಈ ಹಿಂದೆ ನಾನೇ ಉಸ್ತುವಾರಿ ಸಚಿವನಿದ್ದಾಗ ಅಡಿಗಲ್ಲು ಮಾಡಿದ್ದೆ ಆಗ 727 ಎಕರೆ ಜಿಲ್ಲಾಧಿಕಾರಿಗಳ ಮೂಲಕ ಭೂಮಿ ಅಕ್ವಿಜೇಷನ್ ಮಾಡಲಾಗಿತ್ತು. ಮುಂದೆ ಬಂದ ಸರ್ಕಾರಗಳು ಈ ಕಾಮಾಗರಿ ಕೈಗೆತ್ತಿಕೊಳ್ಳಲಿಲ್ಲ ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ತಡವಾಗಿದೆ , ನಂತರ  ಯಡಿಯೂರಪ್ಪ ನವರು ಮತ್ತೆ ಸಿಎಂ ಆದ ಮೇಲೆ ಕಾಮಗಾರಿ ಪ್ರಾರಂಭ ಮಾಡಿದೆವು 220 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣಕ್ಕೆ ಅನುಮೋದನೆ ಕೊಟ್ಟಿದ್ದೇವು , ಮೋದಲ ಹಂತದಲ್ಲಿ 95 ಕೋಟಿ ವೆಚ್ಚ , ಹಾಗೂ ಎರಡನೇ ಹಂತದಲ್ಲಿ 125 ಕೋಟಿಯದಾಗಿದೆ. 320 ಏರ್ ಬಸ್ ಬರಬೇಕು ಎಂದು ಮನವಿ ಸಿಎಂ ಗೆ ಮಾಡಲಾಗಿದ್ದು 320 ಕೋಟಿಗೆ ಪ್ರಾಜೆಕ್ಟ ಕಾಸ್ಟ ಹೆಚ್ಚಿಗೆ ಮಾಡಲಾಗುತ್ತಿದೆ ಎಂದು ಹೇಳಿದರು. ಎರಡು ಹಂತದಲ್ಲಿ ಟೆಂಡರ್ ಆಗಿದೆ 2.6 ಕಿಲೋ ಮಿಟರ್ ರನ್ ವೇ  ಈದೀಗ 3.6 ಕಿಲೋ ಮಿಟರ್ ರನ್ ವೇ ಗೆ ಹೆಚ್ಚಿಸಲಾಗಿದೆ. ಏರ್ ಬಸ್ ಬರುವಂತಹ ವ್ಯವಸ್ಥೆ ಕೂಡಾ ಮಾಡಲಾಗಿದೆ. 125 ಕೋಟಿ ಮುಂದುವರೆದ ಯೋಜನೆಗೆ  ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Like our news?