ಮೈದುಂಬಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಗಗನಚುಕ್ಕಿ ಜಲಪಾತ...!

Tue, Jul 27, 2021

ಮಂಡ್ಯ : ಕಾವೇರಿ ಮತ್ತು ಕಪಿಲಾ ನದಿಯ ಪ್ರವಾಹದ ನೀರಿನಿಂದ  ಗಗನಚುಕ್ಕಿ ಜಲಪಾತ  ಮೈದುಂಬಿ ಹರಿಯುತ್ತಿದೆ...


ಹೌದು , ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಕಳೆದ 6 ತಿಂಗಳಿಂದ ನೀರಿಲ್ಲದೆ ತನ್ನ ನಿಸರ್ಗ ವೈಭವ ಕಳೆದುಕೊಂಡಿತ್ತು... ಆದರೀಗ ಕಾವೇರಿ ಮತ್ತು ಕಪಿಲ ನದಿಯ ಹೆಚ್ಚಿನ ಪ್ರಮಾಣದ ನೀರನ್ನು  KRS ಮತ್ತು ಹಾರಂಗಿ ಡ್ಯಾಂ ನಿಂದ   ಬಿಡುಗಡೆ ಮಾಡಿದ್ದು ;   ಜಿಲ್ಲೆಯಲ್ಲಿರುವ ಈ ಗಗನಚುಕ್ಕಿ ಜಲಪಾತ  ಮೇಲಿಂದ ಧುಮುಕುತ್ತಾ ಹಾಲ್ನೊರೆ ಸೃಷ್ಟಿ ಮಾಡುತ್ತಾ ಪ್ರವಾಸಿಗರನ್ನು ತನ್ನತ್ತಾ ಕೈಬೀಸಿ ಕರೆಯುತ್ತಿದೆ...

Like our news?