ವಿಜಯಪುರದಲ್ಲಿ ಬೈಕ್ ಗಳ ಮೂಖಾಮುಕಿ ಡಿಕ್ಕಿ ; ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ ಜೆಡಿಎಸ್ ಶಾಸಕ..! #Karnataka #Vijayapur #Bike #Accident #JdsMLA

Tue, Jul 20, 2021


ವಿಜಯಪುರ : ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡು ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ.


ಇನ್ನು ಅಪಘಾತವಾದ ಸ್ಥಳದಲ್ಲಿಯೇಯಿದ್ದ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಓರ್ವ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದ್ದು , ಗಾಯಗೊಂಡಿರುವ ಇಬ್ಬರನ್ನು ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಆಟೋದ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೇರೆದಿದ್ದಾರೆ

ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Like our news?