ಆಷಾಢ ಏಕಾದಶಿ ಹಿನ್ನಲೆ ವಿಜಯಪುರ ನಗರದ ವಿಠ್ಠಲ ಮಂದಿರದಲ್ಲಿ ವಿಶೇಷ ಪೂಜೆ..!

Tue, Jul 20, 2021


ವಿಜಯಪುರ : ಇಂದು ಆಷಾಢ ಏಕಾದಶಿ ಹಿನ್ನಲೆಯಲ್ಲಿ ನಗರದ ಹಲವು ದೇವಸ್ಥಾನಗಳಲ್ಲಿ ಇಂದು ವೈಕುಂಠ ಏಕಾದಶಿ ಸಡಗರ ವಿಶೇಷ ಪೂಜೆ ನೆರವರಿಸಲಾಗಿದೆ , ಆಷಾಢ ಏಕಾದಶಿ ದಿನದಂದು ನಗರದ  ವಿಠ್ಠಲ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ,


ದೇವಸ್ಥಾನಕ್ಕೆ ನಸುಕಿನಲ್ಲೇ ಬಂದ ಭಕ್ತರು ಸರದಿಸಾಲಿನಲ್ಲಿ ನಿಂತು ದರ್ಶನ ಪಡೆದ ಜನ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಹೌದು ಇಂದು ನಗರದ ವಿಠ್ಠಲ ಮಂದಿರ  'ದೇವಸ್ಥಾನದಲ್ಲಿ ಈ ದಿನವನ್ನು ಪ್ರತಿವರ್ಷವೂ ವಿಶೇಷವಾಗಿ ಆಚರಿಸುವುದು ವಾಡಿಕೆ. ಈ ವರ್ಷ ಕೂಡ  ಭಕ್ತರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾದ ಹಿನ್ನಲೆಯಲ್ಲಿ ದೇವಸ್ಥಾನದ  ದ್ವಾರಕಕ್ಕೆ ತಳಿರು ತೋರಣ, ಹೂಗಳಿಂದ ಬಾಗಿಲನ್ನು ಸಿಂಗಾರ ಮಾಡಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ನೂರಾರು ಭಕ್ತರು ವಿಠ್ಠಲ ರುಕ್ಮಿಣಿ ದರ್ಶನ್ ಪಡೆದು ಪುನಿತರಾದರು.

Like our news?