SSLC ಪರೀಕ್ಷೆಯಲ್ಲಿ ಸ್ವಯಂ ಸೇವಕರಾಗಿ ಕೊರೊನಾ ಜಾಗೃತಿ ಮೂಡಿಸಿದ NSS ವಿದ್ಯಾರ್ಥಿನಿಯರು..!

Mon, Jul 19, 2021


ವಿಜಯಪುರ : NSS ಘಟಕದ ಅಧಿಕಾರಿ ಮಯೂರ್ ತಿಳಗೂಳಕರ್ ನೇತೃತ್ವದಲ್ಲಿ B.D.E ಮಹಿಳಾ ಮಹಾವಿದ್ಯಾಲಯದ NSS ವಿದ್ಯಾರ್ಥಿನೀಯರು SSLC ಪರೀಕ್ಷಾ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೊರೊನಾ ಜಾಗೃತಿ ಕಾರ್ಯ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.


ಇಂದು ನಡೆದ SSLC ಪರೀಕ್ಷೆ ಸಂದರ್ಭದಲ್ಲಿ ನಗರದ P.D.J.(A&B) ಪ್ರೌಢಶಾಲೆಯಲ್ಲಿ B.D.E ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನೀಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿ ಪರೀಕ್ಷೆಗೆ ಹಾಜಾರಾಗುವ ಪ್ರತಿ ವಿದ್ಯಾರ್ಥಿಗಳಿಗು ಮಾಸ್ಕ್ ಧಾರಣೆ, ದೇಹದ  ತಾಪಮಾನ ತಪಾಸಣೆ ಮತ್ತು ಸ್ಯಾನಿಟೈಜ಼್ ಮಾಡಿದ ಬಳಿಕವಷ್ಟೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿದರು ಈ ಯುವ ಸ್ವಯಂಸೇವಕರ ಈ ಕಾರ್ಯಕ್ಕೆ ಶಾಲಾ ಆಡಳಿತ ವರ್ಗ ಮತ್ತು ಶಿಕ್ಷಕ ವರ್ಗ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಹಾಗೆಯೇ NSS  ಘಟಕದ ಅಧಿಕಾರಿ ಮಯೂರ್ ತಿಳಗೂಳಕರ  ನೇತೃತ್ವದಲ್ಲಿ Covid-19 ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನೆರವೇರಿತು..

Like our news?