ಭೀಮಾತೀರದಲ್ಲಿ ಚಿರತೆ ಪ್ರತ್ಯೇಕ್ಷ ; ಎರಡು ಹಸುಗಳ ಮೇಲೆ ದಾಳಿ..! #Karnataka #Vijayapur #Leopard #Attacks

Wed, Jun 16, 2021

ವಿಜಯಪುರ : ಚಿರತೆ ದಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಬೊಮ್ಮನಹಳ್ಳಿ, ದೇವರನಾವದಗಿ ಗ್ರಾಮದ ಹೊಲಗಳಲ್ಲಿ ಚಿರತೆ ಸಂಚರಿಸಿ ಜಾನುವಾರಗಳ ಮೇಲೆ ಚಿರತೆ ದಾಳಿಗೈದ್ದಿದೆ.


ಇನ್ನು ಹೊಲ ಒಂದರಲ್ಲಿ ಎರಡು ಹಸುಗಳ ಮೇಲೆ ಚಿರತೆ ಮಾಡಿರುವುದಕ್ಕೆ ರೈತರು ಭಯಭೀತರಾಗಿದ್ದಾರೆ,  ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅದಿಕಾರಿಗಳು ದೌಡಾಯಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಂದಗಿ ಮಾಜಿ ಶಾಸಕ ರಮೇಶ್ ಭೂಸನೂರ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದರು. ಚಿರತೆಯನ್ನು ಆದಷ್ಟು ಬೇಗ ಬಂಧಿಸುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ...

Like our news?