ಕೊರೊನಾ ಸೋಂಕಿನಿಂದ ಮೃತಪಟ್ಟ ಬಿ.ಎಲ್.ಡಿ.ಇ ಸಂಸ್ಥೆಯ 16 ಜನ ಸಿಬ್ಬಂದಿ ; 16 ಜನರ ಕುಟುಂಬಳಿಗೆ ನೆರವಾದ ಶಾಸಕ ಎಂ.ಬಿ.ಪಾಟೀಲ್..! #Karnataka #Vijayapur #BLDE #Hospital

Wed, Jun 16, 2021

ವಿಜಯಪುರ : ಕೊರೊನಾ ಸೋಂಕಿನಿಂದ ಮೃತಪಟ್ಟ  ಬಿ.ಎಲ್.ಡಿ.ಇ ಸಂಸ್ಥೆಯ ಸಿಬ್ಬಂದಿಗಳ ಕುಟುಂಬಕ್ಕೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ್ ಆರ್ಥಿಕ ನೆರವಿನ ಜೊತೆಗೆ ಕುಟುಂಬದ ಓರ್ವರಿಗೆ ಉದ್ಯೋಗ ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗುವ ಮೂಲಕ  ಕೊರೊನಾ ವಾರಿಯರ್ಸ್ ಬೆಂಬಲಕ್ಕೆ ನಿಂತು ಮಾದರಿ ನಾಯಕರಾಗಿದ್ದಾರೆ.


ಕೊರೊನಾ ಸೋಂಕಿನಿಂದ ಬಿ.ಎಲ್.ಡಿ.ಇ ಸಂಸ್ಥೆಯ 16 ಜನರು ಮೃತಪಟ್ಟಿದ್ದು , ಈಗಾಗಲೇ 14 ಜನರ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗಿದ್ದು ಮತ್ತು ಓರ್ವರಿಗೆ ಉದ್ಯೋಗ ಮತ್ತು ಮಕ್ಕಳಿಗೆ ಶಿಕ್ಷಣ ನೆರವಿನ ಭರವಸೆ ನೀಡಲಾಗಿದೆ.


ಹೌದು ಕೊರೊನಾ ಸಂಕಷ್ಟದ ಸಮಯದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯು ಕೊರೊನಾ ರೋಗಿಗಳಿಗೆ ಸರ್ಕಾರ ನಿಗದಿಪಡಿಸಿದ ವೆಚ್ಚಕ್ಕಿಂತ ಕಡಿಮೆ ಶುಲ್ಕ ಪಡೆದು ರಾಜ್ಯದಲ್ಲಿ ಮಾದರಿಯಾಗಿತ್ತು, ಈದೀಗ ಸಂಸ್ಥೆಯ ಸಿಬ್ಬಂದಿ ಪರವಾಗಿ ನಿಂತಿರುವ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ ಕೊರೊನಾ ಸೋಂಕಿನಿಂದ ಮೃತಪಟ ಸಿಬ್ಬಂದಿಗೆ ನೆರವು ಘೋಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Like our news?