ವಿಜಯಪುರ ಸಿ.ಇ.ಎನ್. ಪೋಲೀಸರ ಬಲೆಗೆ ಮೂವರು ಆನ್ಲೈನ್ ವಂಚಕರು ಅರೆಸ್ಟ್..! #Karnataka #Vijayapur #Police #OnlineFraud #Arrested

Wed, Jun 16, 2021


ವಿಜಯಪುರ : ಆನ್ಲೈನ್ ನಲ್ಲಿ Credit Bazaar Financial Service Pvt Ltd. Mumbai ಎಂಬ ಹೆಸರಿನಲ್ಲಿ ಸಿಬಿಲ್ ಸ್ಕೋರ್ ಸರಿಪಡಿಸಿಕೊಡುತ್ತೇವೆ ಮತ್ತು ಆನ್‌ಲೈನ್‌ ಸಾಲ ಮಾಡಿಸಿಕೊಡುತ್ತವೆ ಎಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಮೂವರನ್ನು ವಿಜಯಪುರ ಸಿ.ಇ.ಎನ್ ಪೋಲೀಸರು ಬಂಧಿಸಿದ್ದಾರೆ.


ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗ್ರವಾಲ್ ರವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ   ಶ್ರೀ ಎಸ್ ಬಿ ಬೆಂಡೆಗುಂಬಳ ಪಿ ಐ ರವರ ನೇತೃತ್ವದಲ್ಲಿ Credit Bazaar Financial Service  Pvt Ltd. Mumbai ಎಂಬ ಹೆಸರಿನಲ್ಲಿ ಸಿಬಿಲ್ ಸ್ಕೋರ್ ಹೆಚ್ಚಿಸಿ  ಆನ್‌ಲೈನ್‌ ಸಾಲ ಮಂಜೂರು ಮಾಡಿಸಿಕೊಡುತ್ತವೆ ಎಂದು ನಂಬಿಸಿ ವಂಚಿಸುತ್ತಿದ್ದ ಮಹಾರಾಷ್ಟ್ರ ರಾಜ್ಯದ ಮುಂಬೈನ ಆರೋಪಿತರನ್ನು ವಿಜಯಪುರ ಪೋಲೀಸರು ಮುಂಬೈಗೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮೋದ್ ಕುಮಾರ್ ಸಿಂಗ್ (37) , ವಿನೋದ್ ಪಲಾರ್ (28) , ಗೌರವ ಸುಧಾಕರ ಸಾವಂತ್ (29) ಬಂಧಿತರಾಗಿದ್ದು , ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಲ್ಯಾಪ್ಟಾಪ್ , ಮೂರು ಮೊಬೈಲ್ , ಒಂದು ಕಂಪ್ಯೂಟರ್ ಸರ್ವರ್ , ಹಲವಾರು ಬ್ಯಾಂಕ್ ಡೆಬಿಟ್, ಕ್ರೆಡಿಟ್ ಕಾರ್ಡಗಳು ಮತ್ತು ಒಂದು ಹೋಂಡಾ ಸಿಟಿ ಕಾರ್ ವಶಕ್ಕೆ ಪಡೆದುಕೊಂಡಿದ್ದಾರೆ  

ಈ ಪ್ರಕರಣದ ಪತ್ತೆ ಕುರಿತು  ಕಾರ್ಯನಿರ್ವಹಿಸಿದ CEN (Cyber Economic & Narcotic) Crime ಪೊಲೀಸ್ ಠಾಣೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರ್ವಾಲ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Like our news?