ಅಬಕಾರಿ ಪೊಲೀಸರ ದಾಳಿ 15 ಲಕ್ಷ ಮೌಲ್ಯದ ಗೋವಾ ಮದ್ಯ , ನಾಲ್ವರ ಬಂಧನ..! #Karnataka #Belgavi #Goa #Liquor

Tue, Jun 15, 2021

ಬೆಳಗಾವಿ : ಸಹಾಯಕ ಅಬಕಾರಿ ಕಮಿಷನರ್ ಬೆಳಗಾವಿ ಇವರ ಮಾರ್ಗದರ್ಶನ ಅದರ ಅನ್ವಯ ಗೋಕಾಕ್ ವಲಯದ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಬಳಿ ಅಬಕಾರಿ ದಾಳಿ ನಡೆಸಿ 9 ಬಾಕ್ಸ್ 76.62 ಲೀ. ಸುಮಾರು ಹದಿನೈದು ಲಕ್ಷ ರೂ ಮೊತ್ತದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 


ಅಕ್ರಮವಾಗಿ ಸಾಗಿಸುತ್ತಿದ್ದ ಟಾಟಾ ಹೆಕ್ಸಾ ಕಾರ್ ಅನ್ನು ಕೂಡ ಸೀಜ್ ಮಾಡಲಾಗಿದೆ.ದಾಳಿ ನಡೆಸಿದ ವೇಳೆ ಆನಂದ್ ರಾಜು ಕೊಪ್ಪದ್,  ಚಿದಾನಂದ ಅರ್ಜುನ್ ಬಿರಡಿ, ರವಿ ಯಮನಪ್ಪ ಬಾಗೇವಾಡಿ, ಹಾಗೂ ಶಾನೂರ ಮೆಹಬೂಬ್ ಕರಿಪಾಲಿ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ವಶಪಡಿಸಿಕೊಂಡ ಒಟ್ಟು ಮೌಲ್ಯ ರೂ 15,35,000..ಈ ಪ್ರಕರಣವನ್ನು ಶಂಕರ್ ಗೌಡ ಪಾಟೀಲ್, ಐಇ, ಗೋಕಾಕ್ ರೇಂಜ್ ದಾಖಲಿಸಿದ್ದಾರೆ.

Like our news?