ದಲಿತ ಕವಿ ಎಂದೇ ಪ್ರಖ್ಯಾತರಾದ ಸಿದ್ದಲಿಂಗಯ್ಯ ಇನ್ನಿಲ್ಲ...! # Covid #Death # siddalingayya

Fri, Jun 11, 2021

ಬೆಂಗಳೂರು : ಕೋವಿಡ್​ ಸೋಂಕಿಗೆ ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನರಾಗಿದ್ದಾರೆ...


ಹೌದು, 66 ವರ್ಷದ  ಸಿದ್ದಲಿಂಗಯ್ಯ ಅವರು ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದರು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದರು. ಎರಡು ಬರಿ ವಿಧಾನಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು...

ದುರಾದೃಷ್ಟವಶಾತ್ ಸಿದ್ದಲಿಂಗಯ್ಯ  ಕೋವಿಡ್ ಸೋಂಕಿಗೆ ಬಲಿಯಾಗಿ  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು... ಚಿಕಿತ್ಸೆ ಫಲಕಾರಿಯಾಗದೆ  ಇಂದು ಕೊನೆ ಉಸಿರೆಳೆದಿದ್ದು , ಸಾಹಿತ್ಯ ಲೋಕದ  ಪ್ರಮುಖ ಕೊಂಡಿ ಕಳಚಿದಂತಾಗಿದೆ... ಮೃತ ಸಾಹಿತಿಯ ಮರಣಕ್ಕೆ  ಸಾಹಿತ್ಯ ಲೋಕ ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ..

Like our news?