ರಾಜ್ಯದಲ್ಲಿಂದು 15721 ಜನರು ಗುಣಮುಖ, 11042 ಜನರಲ್ಲಿ ಸೋಂಕು 194 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

Thu, Jun 10, 2021


ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 11042 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 15721 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 194 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2739290 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.


ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 11042 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು ಒಂದೇ ದಿನ 15721 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 2496132 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 210652 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 32485 ಜನ ಸಾವನ್ನಪ್ಪಿದ್ದಾರೆ.

                   ಜಿಲ್ಲಾವಾರು ಮಾಹಿತಿ...             

Like our news?