ರಾಜ್ಯದಲ್ಲಿಂದು 20246 ಜನರು ಗುಣಮುಖ, 10959 ಜನರಲ್ಲಿ ಸೋಂಕು 192 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update

Wed, Jun 09, 2021

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 10959 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 20246 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 192 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2728248 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.


ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 10959 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು ಒಂದೇ ದಿನ 20246 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 2480411 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 215525 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 32291 ಜನ ಸಾವನ್ನಪ್ಪಿದ್ದಾರೆ.

                     ಜಿಲ್ಲಾವಾರು ಮಾಹಿತಿ...          

Like our news?