ಶ್ರಮಿಕ ವರ್ಗಕ್ಕೆ 1,250 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ BSY..! #Karnataka #BJP #CMBSY #Lockdown #Package

Wed, May 19, 2021

ಬೆಂಗಳೂರು : ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಹತ್ವದ ಸಭೆ ನಡೆಸಿದ ಬಳಿಕ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಟೋ ,ಟ್ಯಾಕ್ಸಿ  ಚಾಲಕರು, ಸವಿತಾ ಸಮಾಜ , ಕಲಾವಿದರು , ಬೀದಿ ಬದಿಯ ವ್ಯಾಪಾರಿಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.


ಅಟೋ , ಟ್ಯಾಕ್ಸಿ ಚಾಲಕರಿಗೆ  3000 ಸಾವಿರ ರೂಪಾಯಿ ಧನಸಹಾಯ., 

ಸವಿತಾ ಸಮಾಜ 3000 ಸಾವಿರ ರೂಪಾಯಿ ಧನಸಹಾಯ , 

ಬೀದಿ ಬದಿಯ ಹೂ ಹಣ್ಣು ವ್ಯಾಪಾರಿಗಳಿಗೆ 3000 ಸಾವಿರ ರೂಪಾಯಿ , 

ಕಲಾವಿದರು , ಕಲಾ ತಂಡಗಳಿಗೆ ತಲಾ 3000 ಸಾವಿರ ರೂಪಾಯಿ ಧನ ಸಹಾಯ ಘೋಷಿಸಿದ್ದಾರೆ.

ಇನ್ನೂ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತ ಚೀಟಿದಾರರ ಕುಟುಂಬದ ಪ್ರತಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ , ಎಪಿಎಲ್ ಕಾರ್ಡುದಾರರಿಗೆ 15  ರೂಪಾಯಿ ಕೆಜಿ ಅಕ್ಕಿ

ಬಿಬಿಎಂಪಿ ವ್ಯಾಪ್ತಿ ಮತ್ತು  ನಗರ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟಕ್ಕೆ ವ್ಯವಸ್ಥೆ,

ಕೊರೊನಾ ರೋಗಿಗಳಿಗೆ ಸರ್ಕಾರಿ ಅಸ್ಪತ್ರೆಗಳಲಿ ಉಚಿತ ಚಿಕಿತ್ಸೆ , ಕೋವಿಡ್ ನಿರ್ವಹಣೆಗೆ ಗ್ರಾಮಪಂಚಾಯಿತಿಗಳಿಗೆ ಹಣ  ಒಟ್ಟು 1250 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಹೂವು ಬೆಳಗಾರರಿಗೆ ಪ್ರತಿ ಹೆಕ್ಟರ್ ಹೂ ಹಾನಿಗೆ 10 ಸಾವಿರ ಸಹಾಯಧನ, ಹಣ್ಣು ಮತ್ತು ತರಕಾರಿ ಬೆಳಗಾರರಿಗೆ ಒಂದು ಹೆಕ್ಟರ್ ಗೆ 10 ಸಾವಿರ ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.

Like our news?