ಸಚಿವ ಎಂ ಬಿ ಪಾಟೀಲ್ ಸರ್ಕಾರಿ ಪ್ರತಿನಿಧಿ ಹೀಗಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡತ್ತಿಲ್ಲಾ ಬಸವ ಮೃತ್ಯೂಂಜಯ ಸ್ವಾಮೀಜಿ ಹೇಳಿಕೆ.... Vijaypura#basava.....

Sat, Jan 12, 2019

ವಿಜಯಪುರ : ಲಿಂಗಾಯತ್ ಪ್ರತ್ಯೇಕ ಧರ್ಮದ ಹೋರಾಟ ನಿರಂತರವಾಗಿದೆ ಲಿಂಗಾಯತ್ ಪ್ರತ್ಯೇಕ ಧರ್ಮಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಶಿಫಾರಸ್ಸು ಮಾಡಿದೆ ಮೋದಿ ಅವರು ಶಿಫಾರಸ್ಸು ಮಾಡುತ್ತಾರೆ ಎಂದು ಅಂದುಕೊಂಡಿದ್ದೆ ಆದರೆ ಕಾಣದ ಕೈಗಳ ಆಟ ಅಲ್ಲಿ ನಡೆಯುತ್ತಿದೆ .

ಎಲ್ಲ ಜಾತಿ ಜನಾಂಗದವರಿಗೆ ಬಸವ ತತ್ವ ಪಾಲಿಸಬೇಕು. ಎಲ್ಲ‌ ಸಮುದಾಯದವರು ಈಗಾಗಲೇ ಪೀಠ ಮಾಡಿಕೊಂಡಿದ್ದಾರೆ. ಅದೇ ರೀತಿ ನಮ್ಮ ಸಮುದಾಯ ಕೂಡಾ ಪೀಠ ಮಾಡಿಕೊಂಡಿದೆ ಲಿಂಗಾಯತ್ ಸಮಾಜದಲ್ಲಿ ೯೯ ಒಳ ಪಂಗಡಗಳಿವೆ, ಅಲ್ಪ ಸಂಖ್ಯಾತರ ಸ್ಥಾನ ಮಾನ ದೊರೆತರೆ ಸಮಾಜಕ್ಕೆ ಒಳಿತು ಎಂದರು


ಸಚಿವ ಎಂ.ಬಿ.ಪಾಟೀಲ್ ಸರ್ಕಾರಿ ಪ್ರತಿನಿಧಿ ಈ ಹಿನ್ನಲೆಯಲ್ಲಿ ‌ಅವರು ಈಗ ಮಾತನಾಡುತ್ತಿಲ್ಲ ಪ್ರದಾನಿಗಳಿಗೆ ಕೂಡಾ ಬಸವಣ್ಣನ ಬಗ್ಗೆ ಅಭಿಮಾನವಿದೆ ಆದರೆ ಲಿಂಗಾಯತರು ಬೆಳೆಯಬಾರದು ಎಂಬ ಹಿನ್ನಲೆಯಲ್ಲಿ ಕಾಣದ ಕೈಗಳು‌ ಆಟವಾಡುತ್ತಿವೆ ಅಷ್ಟೇ.ಲೋಕ‌ ಸಭಾ ಚುನಾವಣೆಯ ಮುಂಚೆಯೇ ಪ್ರದಾನಿಗಳಿಗೆ ಬೇಟಿ ಮಾಡಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಮನವಿ ಸಲ್ಲಿಸುತ್ತೇವೆ ಎಂದು ಮಾದ್ಯಮಗೋಷ್ಠಿಯಲ್ಲಿ ಬಸವ ಮೃತ್ಯೂಂಜಯ ಸ್ವಾಮಿಜಿ ಹೇಳಿದ್ದಾರೆ.

Like our news?