ಲಕ್ಷಗಟ್ಟಲೆ ಸರ್ಕಾರಿ ಹಣ ಲೂಟಿ ಹೊಡೆದ ಎಫ್.ಡಿ.ಎ ಅಧಿಕಾರಿ ಮತ್ತು ಪ್ರಾಂಶುಪಾಲ ಎಸಿಬಿ ವಶಕ್ಕೆ...! #Karnataka #College #Scam

Sat, Dec 19, 2020

ತುಮಕೂರು : 40 ಲಕ್ಷ ರೂಪಾಯಿ ದುರುಪಯೋಗದ ಹಿನ್ನಲೆಯಲ್ಲಿ ತಿಪಟೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ವಿರುದ್ಧ ಎಫ್‌ಐಆರ್ ದಾಖಲಾಗಿದೆ..


ಹೌದು, ಅಲ್ಲಮಪ್ರಭು ಮತ್ತು ಎಫ್​ಡಿಎ ಸುನೀಲ್​  ಸೇರಿ ಸುಮಾರು 40 ಲಕ್ಷ ರೂ.ಗೂ ಹೆಚ್ಚು ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ..


ಇಬ್ಬರೂ ಅತಿಥಿ ಉಪನ್ಯಾಸಕರ ಸಂಬಳವನ್ನ ಅಕ್ರಮವಾಗಿ ತಮ್ಮ ಕುಟುಂಬದ ಸದಸ್ಯರಿಗೆ ವರ್ಗಾವಣೆ ಸೇರಿದಂತೆ ಕಾಲೇಜು ಅಭಿವೃದ್ಧಿ ಹೆಸರಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಣೆ ಮಾಡಿ ಲಕ್ಷಗಟ್ಟಲೆ ಹಣ ಲೂಟಿ ಮಾಡಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈಗ ಆರೋಪಿಗಳು ಎಸಿಬಿ ಅಧಿಕಾರಿಗಳ ವಶದಲ್ಲಿದ್ದಾರೆ...

Like our news?