ಮೈಸೂರು :
ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೋರೇಷನ್ ಲಿಮಿಟೆಡ್ (ಐ.ಆರ್.ಸಿ.ಟಿ.ಸಿ) ವತಿಯಿಂದ ಈ ಬಾರಿ ಕರ್ನಾಟಕದ ಭಕ್ತರು ಹಾಗೂ ಪ್ರವಾಸಿಗರಿಗಾಗಿ `ತೀರ್ಥ ಯಾತ್ರೆ’ ಎಂಬ 6 ರಾತ್ರಿ / 7 ಹಗಲುಗಳ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು.ಆಯೋಜಿಸಲಾಗಿದೆ..
ಈ ವಿಶೇಷ ಪ್ರವಾಸಿ ರೈಲು ನವೆಂಬರ್ 26 ರಂದು ಬೆಂಗಳೂರಿನ ವೈಟ್ ಫೀಲ್ಡ್ ರೈಲು ನಿಲ್ದಾಣದಿಂದ ಹೊರಡಲಿದ್ದು, ಪುರಿ -ಕೋನಾರ್ಕ-ಕೊಲ್ಕತ್ತಾ, ದೇವಸ್ಥಾನ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ 6,615 ರೂ. ಇರಲಿದೆ.
ಈ ವಿಶೇಷ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ರೈಲು ಪ್ರಯಾಣ, ರಾತ್ರಿ ಉಳಿಯಲು ಅಥವಾ ಫ್ರೆಶ್ ಆಗಲು ಧರ್ಮಶಾಲಾ / ಹಾಲ್ / ಡಾರ್ಮಿಟೋರೀಸ್ ವ್ಯವಸ್ಥೆ ಬಹು ಹಂಚಿಕೆ ಆಧಾರದ ಮೇಲೆ ನೀಡಲಾಗುವದು. ಅಲ್ಲದೆ ಬೆಳಗಿನ ಟೀ, ಕಾಫಿ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಜೊತೆಗೆ ದಿನಕ್ಕೆ ಒಂದು ಲೀಟರ್ ಕುಡಿಯುವ ನೀರಿನ ಬಾಟಲ್ ನೀಡಲಾಗುವದು.ಪ್ರವಾಸಿ ವ್ಯವಸ್ಥಾಪಕರು ಮತ್ತು ಭದ್ರತೆ ಸಿಬ್ಬಂದಿ ವ್ಯವಸ್ಥೆ ಮಾಡಲಿದ್ದು, 55 ಸೀಟರ್ ಸಾಮಾನ್ಯ ಬಸ್ಗಳಲ್ಲಿ ಸ್ಥಳೀಯ ಸ್ಥಳಗಳ ವೀಕ್ಷಣೆ ಮಾಡಬಹುದಾಗಿದೆ.
ಈ ಪ್ರವಾಸಕ್ಕಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು ಎಲ್ಟಿಸಿ ಸೌಲಭ್ಯ ಕೂಡ ಪಡೆಯಬಹುದು.ಈ ಪ್ರವಾಸಕ್ಕಾಗಿ ಬುಕ್ಕಿಂಗ್ ಪ್ರಾರಂಭವಾಗಿದ್ದು, ಐಆರ್ಸಿಟಿಸಿ ಕೌಂಟರ್ಗಳಲ್ಲಿ ಮತ್ತು ಆನ್ಲೈನ್ನಲ್ಲಿ www.irctctourism.com ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.
ಬುಕ್ಕಿಂಗ್ ಅಥವಾ ಹೆಚ್ಚಿನ ವಿವರಗಳಿಗಾಗಿ ಬೆಂಗಳೂರಿನ ರಾಜಾಜಿನಗರ ಪ್ರಾದೇಶಿಕ ಕಚೇರಿಯ ಮೊ.ಸಂ. 8595931291, 8595931290, ಬೆಂಗಳೂರು ರೈಲು ನಿಲ್ದಾಣ ಮೊ.ಸಂ. 8595931292, ಮೈಸೂರು ರೈಲು ನಿಲ್ದಾಣ ಮೊ.ಸಂ. 8595931294 ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣ ಮೊ.ಸಂ. 8595931293 ಅನ್ನು ಸಂಪರ್ಕಿಸುವಂತೆ ಐ.ಆರ್.ಸಿ.ಟಿ.ಸಿ. ಪ್ರಾದೇಶಿಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Sign up here to get the latest post directly to your inbox.