ಗೃಹ ಬಳಕೆ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ; ದಂಧೆ ನಡೆಸುತ್ತಿದ್ದ ಕಲ್ಲಮೇಶ ಆಳೂರ ಬಂಧನ..! #Vijayapur #Gas #Refilling #Kallu #Aloor #Accused #Arrested

Wed, Oct 07, 2020

ವಿಜಯಪುರ : ಗೃಹ ಬಳಕೆಯ ಸಿಲಿಂಡರ್ ಗಳನ್ನು ಅಟೋಗಳಿಗೆ ರಿಫಿಲ್ಲಿಂಗ್ ದಂಧೆ ನಡೆಸುತಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿ ಅಂದಾಜು 1,28,00 ರೂ ಮೌಲ್ಯದ ಗ್ಯಾಸ್ ಮತ್ತು ಗ್ಯಾಸ್ ಫಿಲ್ಲಿಂಗ್ ಮಶಿನ್ ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿ ಕಲ್ಲಮೇಶ ಆಳೂರ 


ಹೌದು ಕಲ್ಲಮೇಶ್ ಚನ್ನಪ್ಪ ಆಳೂರ ಬಂಧಿತ ಆರೋಪಿ, ಕಲ್ಲಮೇಶ ಆಳೂರ  ನಗರದ ಹೊರವಲಯ ಇಂಡಿ ರಸ್ತೆಯ ಜ್ಯೋತಿ ಪ್ಯಾಕ್ಟರಿಯ ಹಿಂದೆ ಪತ್ರಾಸ ಶೆಡ್ನಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳನ್ನು  ಅಕ್ರಮವಾಗಿ ಸಂಗ್ರಹಿಸಿ ಅಟೋಗಳಿಗೆ ರೀಫಿಲ್ಲಿಂಗ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ನಿರೀಕ್ಷಕರು  ಹಾಗೂ ಪೋಲೀಸರು ದಾಳಿ ನಡೆಸಿದ್ದಾರೆ , ಎಪಿಎಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . 


ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಮಾರ್ಗದರ್ಶನದಲ್ಲಿ ಡಿಸಿಐಬಿ , ಪಿಎಸ್ಐ ಸಿಬಿ ಬಾಗೇವಾಡಿ , ಪಿಎಸ್ಐ ಐ, ಎಂ ದುಂಡಸಿ ಹಾಗೂ ಸಿಬ್ಬಂದಿ ದಾಳಿ. ನಡೆಸಿ 25 ಗೃಹ ಬಳಕೆಯ ಸಿಲಿಂಡರ್ , 13 ಕಮರ್ಷಿಯಲ್ ಖಾಲಿ ಸಿಲಿಂಡರ್, 21 ತುಂಬಿದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ , ಗ್ಯಾಸ್ ತೂಕ ಮಾಡುವ ಯಂತ್ರ , ಗ್ಯಾಸ್ ಫಿಲ್ಲಿಂಗ್ ಯಂತ್ರ ವಶಕ್ಕೆ ಪಡೆದಿದ್ದಾರೆ.

Like our news?