ಮಹಾನಗರ ಪಾಲಿಕೆ ಮಾಜಿ ಸದಸ್ಯನ ಮೇಲೆ ಹಲ್ಲೆಯಾಗಿ 48 ಘಂಟೆಗಳಾದ್ರು FIR ದಾಖಲಿಸಿಕೊಳ್ಳದಕ್ಕೆ ಅಸಮಾಧಾನ ಹೊರಹಾಕಿದ ಪ್ರಕಾಶ ಮಿರ್ಜಿ...! #Police#BJP #palike #exmember

Tue, Oct 06, 2020

ವಿಜಯಪುರ : ಮಹಾನಗರ ಪಾಲಿಕೆ ಮಾಜಿ ಸದಸ್ಯನ ಮೇಲೆ ಪೊಲಿಸರು ದೌರ್ಜನ್ಯ ನಡೆಸಿ ಕಾಲು ಮೂಳೆ ಮೂರಿಯುವ  ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಡೆದ ಘಟನೆಯಾದರೇನು..?


ರವಿವಾರ ಸಾಯಂಕಾಲ 5 ಘಂಟೆಯ ಸುಮಾರು ನಗರದ ಗಾಂಧಿ ಚೌಕಿನಲ್ಲಿ ಮಹಿಳೆಯೊರ್ವಳಿಗೆ ಮಾಸ್ಕ್ ಹಾಕದೇ ಇದುದ್ದಕ್ಕೆ ದಂಡ ವಿಧಿಸುತ್ತಿದ್ದಾಗ ಆ ಮಹಿಳೆ ನನಗೆ ಪೊನ್ ಮಾಡಿದ್ದರು ಆ ವೇಳೆ ನಾನು ಗಾಂಧಿಚೌಕ್ ಗೆ ಹೋಗಿದ್ದೆ, ಆಗ ಸ್ಥಳದಲ್ಲಿದ್ದ ಮಹಿಳಾ ಪಿ.ಎಸ್.ಐ. ಚೌರ ಎಂಬುವರಿಂದ ಮಹಿಳೆಯ ಎದೆಯ ಮೇಲಿನ ಬಟ್ಟೆ ಹಿಡಿದು ಎಳೆದಾಗ ಆಕ್ಷೇಪ ವ್ಯಕ್ತಪಡಿಸಿ ಪಿ.ಎಸ್.ಐ.ಯ ಚೌರರವರಿಗೆ  ನೀವು ಮಹಿಳೆಯಾಗಿ ಮಹಿಳೆಯ ಎದೆಯ ಮೇಲೆ ಕೈ ಹಾಕಿ ಎಳೆದಾಡುವುದು  ಸರಿಯಲ್ಲ ಎಂದಿದ್ದಕ್ಕೆ ನನ್ನ ಮೇಲೆ ದಬ್ಬಾಳಿಕೆ ನಡೆಸಿದ್ರು ಆಗ ನಾನು ಒಬ್ಬ ಜನಪ್ರತಿನಿಧಿ ಮಹಾನಗರ ಪಾಲಿಕೆ ಮಾಜಿ ಸದಸ್ಯನೆಂದು ಹೇಳಿದ್ರನು  ಹಲ್ಲೆ ನಡೆಸುತ್ತಾ  ಕಾಲರ್ ಶರ್ಟ್ ಹಿಡಿದು ಗಾಂಧಿಚೌಕ್ ಠಾಣೆಗೆ  ಎಳೆದುಕೊಂಡು ಹೋಗಿ ಕೆನ್ನೆಗೆ ಸೇರಿದಂತೆ ಹಲವೆಡೆ ಹಲ್ಲೆ ನಡೆಸಿ  ಲಾಠಿಯಿಂದ ಕಾಲಿಗೆ ಹೊಡೆದ ಪರಿಣಾಮ ನನ್ನ ಕಾಲಿಗೆ ಭಾರಿ ಪೆಟ್ಟು ಬಿದ್ದಿದೆ  ಕಾಲಿನ ಬ್ಲಡ್ ವೇ ಬ್ಲಾಕ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.


ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಪೊಲಿಸರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು ವಿಜಯಪುರ ನಗರ ಗಾಂಧಿಚೌಕ್ ಹಾಗೂ ಸಂಚಾರಿ ಠಾಣೆಯ ಎ.ಎಸ್.ಐ. ಹಾಗೂ ಹೆಡ್ ಕಾನ್ಸಟೇಬಲ್ ಹಲ್ಲೆ ಮಾಡಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಲು ಪಾಲಿಕೆ ಮಾಜಿಸದಸ್ಯ ಪ್ರಕಾಶ್ ಮಿರ್ಜಿ ಆಗ್ರಹಿಸಿದ್ದಾರೆ. ಮತ್ತು ಘಟನೆ ನಡೆದು 48 ಘಂಟೆಗಳಾಗಿದೆ ಆಸ್ಪತ್ರೆಯಿಂದ ಠಾಣೆಗೆ  MLC ಪ್ರಕರಣ ಕಳುಹಿಸಿ 24 ಗಂಟೆಯಾದರೂ ಪೋಲಿಸ್ ಠಾಣೆಯಿಂದ ಯಾವುದೇ ಪ್ರತಿಕ್ರಿಯೆ ಬರದೆ ಇರುವುದು ಬೇಸರ ಸಂಗತಿ ಒಬ್ಬ ಜನಪ್ರತಿನಿಧಿಯಾಗಿ ನನ್ನ ಮೇಲೆ  ಈ ರೀತಿಯಾದರೆ  ಸಾಮಾನ್ಯ ಜನರ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Like our news?