ಡ್ರಗ್ಸ್ ಮಾಫಿಯಾ ವಿರುದ್ಧ ಎಬಿವಿಪಿ ಸಹಿ ಅಭಿಯಾನ ; ಮಕ್ಕಳ ಪೋಷಕರು ಸಹ ಅಭಿಯಾನದಲ್ಲಿ ಭಾಗಿ.! #ABVP #Sign #Protest #in #Vijayapur

Wed, Sep 09, 2020

ವಿಜಯಪುರಸಮಾಜಕ್ಕೆ ಕಂಟಕವಾಗಿ ಕಾಡುತ್ತಿರುವ ಡ್ರಗ್ಸ್ ಜಾಲದಲ್ಲಿ ತೊಡಗಿದವರನ್ನು ತಕ್ಷಣವೇ ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಇಂದು ನಗರದ ಸಿದ್ದೇಶ್ವರ ದೇವಸ್ಥಾನದ ಮುಂದೆ ಸಹಿ ಸಂಗ್ರಹ ಅಭಿಯಾನ ಕೈಗೊಂಡು ಡ್ರಗ್ಸ್ ಮಾಫಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು...


ಹೌದು ಇತ್ತೀಚೆಗೆ ಭಾರಿ ತಲ್ಲಣವನ್ನುಂಟು ಮಾಡಿರುವ ಡಗ್ಸ್ ದಂಧೆ ಪ್ರಕರಣದಲ್ಲಿ ಘಟಾನುಘಟಿಗಳೇ ಪಾಲ್ಗೊಂಡಿರುವ ಕಾರಣ ಸರಿಯಾದ ತನಿಖೆ  ಮಾಡಬೇಕೆಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.

ಅಪರಾಧಿಗಳು ನಿರ್ದಾಕ್ಷಿಣ್ಯವಾಗಿ ದಂಡನೆಗೆ ಒಳಗಾಗಬೇಕು ಮತ್ತು ದೇಶ ಮತ್ತು ಯುವ ಸಮುದಾಯ ಡ್ರಗ್ಸ್ ಮುಕ್ತವಾಗಬೇಕೆಂದು ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ನಡೆಸಿದರು, ಈ ವೇಳೆ ನೂರಾರು ಯುವಕರು ಸಹಿ ಮಾಡುವ ಮೂಲಕ ಡ್ರಗ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಟ್ಟರು. ಇನ್ನು ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಲೇಬೇಕು ಎನ್ನುವ ನಿಟ್ಟಿನಲ್ಲಿ ಯೋಗೇಶ್ವರೀ ಮಾತಾ  ಮತ್ತು ಪೋಲಿಸ್ ಸಿಬ್ಬಂದಿ ಸೇರಿದಂತೆ ಪಾಲಕರು ಸಹ ಸಹಿ ಅಭಿಯಾನದಲ್ಲಿ ಭಾಗವಹಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಸಹಿ ಅಭಿಯಾನಕ್ಕೆ ಪಾಲಕರು ಸಹ ಕೈಜೋಡಿಸಿದ್ದಾರೆ.Like our news?