ದರೋಡೆ ನಡೆಸಲು ಹೋಗಿ ಅರೆಸ್ಟ್ ಆದ ಕಿರಾತಕ ಗ್ಯಾಂಗ್ : ಗಾಂಜಾ ಸೇರಿದಂತೆ ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದ ಖಾಕಿ...! #Crime #Karnataka #Police

Fri, Sep 04, 2020

ಶಿರಸಿ :ಮಾರಕಾಸ್ತ್ರ ಬಳಸಿ ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ... 


ಹೌದು, ಬಂಧಿತರನ್ನು  ಮುರುಗೇಶ ಪೂಜಾರಿ (20), ಮಹಮ್ಮದ್ ಯಾಸೀನ್ (23),  ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19),  ಮರ್ದಾನ್ ಶಫಿಸಾಬ (19) ಹಾಗೂ ಮರಾಠಿಕೊಪ್ಪದ ಚರಣ್ ನಾಯ್ಕ (19) ಎಂದು ಗುರುತಿಸಲಾಗಿದ್ದು ; ಕೃತ್ಯದ ಮುಖ್ಯ ಆರೋಪಿಯಾಗಿದ್ದ  ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದಾನೆ‌...

ಶಿರಸಿ ಮಾರುಕಟ್ಟೆ ಠಾಣೆ ಪ್ರಕರಣ ದಾಖಲಾಗಿದ್ದು , ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ವೇಳೆ ಪಿಎಸ್ಐ ನಾಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ  ನಡೆಸಿ ಬಂಧಿತರಿಂದ ಕೃತ್ಯಕ್ಕೆ ಬಳಸಲು ಇಟ್ಟುಕೊಂಡಿದ್ದ ವಸ್ತುಗಳು ಹಾಗೂ ಮೋಟಾರ್ ಸೈಕಲ್ ಮತ್ತು ಅಂದಾಜು 20 ಸಾವಿರ ಮೌಲ್ಯದ 912 ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ...

Like our news?