ಅನೇಕ ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಕಜಕೀಸ್ಥಾನದಲ್ಲಿ ಮತ್ತೊಂದು ಮಾರಣಾಂತಿಕ ಅನಾಮಧೇಯ ವೈರಸ್ ಪತ್ತೆಯಾಗಿದೆ...
ಹೌದು, ಇದೇನಪ್ಪಾ ಶಾಕಿಂಗ್ ಸ್ಟೋರಿ ಎಂದು ಅಚ್ಚರಿ ಪಡಬೇಡಿ ನೈಜ್ಯತೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ....
ಕೊರೋನಾಗಿಂತಲೂ ಅಪಾಯಕಾರಿ ಮತ್ತು ಪ್ರಾಣಾಂತಕ ವೈರಸ್ ಒಂದು ಕಜಕಿಸ್ತಾನದಲ್ಲಿ ಜನ್ಮತಾಳಿದೆ ಎಂದು ಚೀನಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ... ಕಳೆದ 6 ತಿಂಗಳಲ್ಲಿ ಈ ವೈರಸ್ ಗೆ ಆ ದೇಶದಲ್ಲಿ 1,772 ಮಂದಿ ಬಲಿಯಾಗಿದ್ದಾರೆ.. ಈ ಪೈಕಿ ಜೂನ್ ತಿಂಗಳೊಂದರಲ್ಲಿಯೇ 628 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೆಂಟ್ರಲ್ ಏಷ್ಯಾದ ಚೀನಾದ ರಾಯಭಾರ ಕಚೇರಿ ಹೇಳಿದೆ.
ಈ ಅನಾಮಧೇಯ ವೈರಸ್ ನ ಜೀವಹಾನಿ ಪ್ರಮಾಣ ಕೋವಿಡ್-19ಗಿಂತಲೂ ಹೆಚ್ಚಾಗಿದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.ಇನ್ನು ಇದೇ ವಿಚಾರವಾಗಿ ಕಜಕಿಸ್ಥಾನದ ಸ್ಥಳೀಯ ಮಾಧ್ಯಮಗಳೂ ಕೂಡ ವರದಿ ಮಾಡಿದ್ದು, ಇತ್ತ ಕಜಕಿಸ್ತಾನ ಆರೋಗ್ಯ ಸಚಿವರು ಮಾತನಾಡಿ ಕೋವಿಡ್-19ಗೆ ಹೋಲಿಕೆ ಮಾಡಿದರೆ ಈ ಅನಾಮಾಧೇಯ ವೈರಸ್ ಗೆ ತುತ್ತಾಗುತ್ತಿರುವವರ ಪ್ರಮಾಣ 2ರಿಂದ ಮೂರು ಪಟ್ಟು ಅಧಿಕವಾಗಿದೆ..ಮುಂದಿನವಾರದಿಂದ ಕೊರೋನಾ ವೈರಸ್ ನಂತೆಯೇ ಈ ನಿಗೂಢ ವೈರಸ್ ಗೆ ತುತ್ತಾದವರ ಮತ್ತು ಬಲಿಯಾದವ ಅಂಕಿ ಅಂಶಗಳನ್ನು ಮಾಧ್ಯಮಗಳಿಗೆ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಪ್ರಸ್ತುತ ಈ ವೈರಸ್ ನ ಸ್ಥಿತಿಗತಿ ತಿಳಿಯುವ ಕುರಿತು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ..ಇದನ್ನು ಕಜಕಿಸ್ತಾನದ ಪ್ರಮುಖ ಸುದ್ದಿಸಂಸ್ಥೆ ಕಜಿನ್ ಫಾರ್ಮ್ ವರದಿ ಮಾಡಿದೆ...
ಒಟ್ಟಿನಲ್ಲಿ ಒಂದು ಸಣ್ಣ ವೈರಾಣು ಮಿಲಿಯನ್ ಗಟ್ಟಲೆ ಜೀವಕಣಗಳನ್ನು ಹೊಂದಿರುವ ಮನುಷ್ಯನನ್ನು ಬಗ್ಗುಬಡಿಸಿರುವುದು ಒಂದೆಡೆಯಾದರೆ; ಅನಾಮಧೇಯ ವೈರಸ್ ಹಾವಳಿ ವಿಶ್ವವನ್ನು ಅವನತಿಗೆ ಕೊಂಡೊಯ್ಯುವ ಭಯ ಇನ್ನೊಂದೆಡೆ...
Sign up here to get the latest post directly to your inbox.