ನವೆಂಬರವರಗೆ ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ ;ಇನ್ಮುಂದೆ ಒಂದೇ ರಾಷ್ಟ್ರ ಒಂದೇ ರೇಶನ್ ಕಾರ್ಡ್...! #PM #NarendraModi #BJP

Tue, Jun 30, 2020

ನವದೆಹಲಿ : ನವೆಂಬರವರಗೆ ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ ಮಾಡುವ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಇನ್ಮುಂದೆ ಒಂದೇ ರಾಷ್ಟ್ರ ಒಂದೇ ರೇಶನ್ ಕಾರ್ಡ್ವವನ್ನು ಜಾರಿಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ತಿಂಗಳ ಅಂತ್ಯದವರೆಗೆ ಸರ್ಕಾರದಿಂದ ಈ ಐದು ತಿಂಗಳಲ್ಲಿ ಹೆಚ್ಚು ಜನರಿಗೆ ಪ್ರತಿ ತಿಂಗಳು, ಕುಟುಂಬದ ಪ್ರತಿ ಸದಸ್ಯರಿಗೆ ಐದು ತಿಂಗಳು ಐದು ಕೆ. ಜಿ ಗೋಧಿ ಅಥವಾ ಅಕ್ಕಿ ನೀಡಲಾಗುತ್ತದೆ. ಜೊತೆಗೆ ಒಂದು ಕೆ. ಜಿ. ಕಡ್ಲೆ ಕೂಡಾ ನೀಡಲಾಗುತ್ತದೆ ಒಂದೇ ರಾಷ್ಟ್ರ ಒಂದೇ ರೇಷನ್ ಕಾರ್ಡ್‌ ಯೋಜನೆ ಕೂಡಾ ಜಾರಿಗೊಳಿಸಲಾಗುತ್ತದೆ. ಇದರಿಂದ ಕೆಲಸಕ್ಕಾಗಿ ಬೇರೆ ರಾಜ್ಯಕ್ಕೆ ತೆರಳುವ ಬಡವರಿಗೆ ಇದು ಬಹಳ ಉಪಯೋಗವಾಗುತ್ತದೆ. ಇದು ಕೃಷಿಕರು, ರೈತರು ಹಾಗೂ ನ್ಯಾಯಯುತವಾಗಿ ಟ್ಯಾಕ್ಸ್‌ ಕಟ್ಟುವವರಿಂದ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ....

Like our news?
Copyrights

.