ವಿಜಯಪುರದಲ್ಲಿ ಕೊರೊನಾಗೆ ಕ್ಯಾರೆ ಎನ್ನದ ಜನತೆ ; ಟಗರು ಕಾಳಗದಲ್ಲಿ ನೂರಾರು ಜನರು ಭಾಗಿ...! #Vijayapur #Karnataka

Mon, Jun 29, 2020

ವಿಜಯಪುರ : ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದರೂ ಜನ ಎಚ್ಚರಗೊಳ್ಳದೆ ಟಗರು ಕಾಳಗ  ಏರ್ಪಡಿಸಿ ನೂರಾರು ಜನ ಭಾಗಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ವೀರೇಶನಗರ ಗ್ರಾಮದಲ್ಲಿ ನಡೆದಿದೆ.


ಹೌದು ಇಂದು ಟಗರಿನ ಕಾಳಗ ಏರ್ಪಡಿಸಿ ನೂರಾರು ಜನರು ಗುಂಪು ಗುಂಪಾಗಿ ನಿಂತು ಟಗರಿನ ಕಾಳಗ ವೀಕ್ಷಸಿದ್ದಾರೆ ಆದರೇ ರಾಜ್ಯ ಸರ್ಕಾರ ಆದೇಶದನ್ವಯ ಯಾವುದೇ ಕಾರ್ಯಕ್ರಮ ಮಾಡಬೇಕಾದರೇ ಮುಂಚಿತವಾಗಿ ಪರವಾನಿಗೆ ಪಡೆದಿರಬೇಕು ಹಾಗೂ ಕಾರ್ಯಕ್ರಮಕ್ಕೆ ಇಂತಿಷ್ಟು ಜನ, ಮಾಸ್ಕ ಕಡ್ಡಾಯ ಹಾಗೂ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು ಆದರೆ ಜನರು ಕ್ಯಾರೆ ಎನ್ನದೆ  ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವೀಕ್ಷಿಸಿದ್ದು ಕೆಲ ಸ್ಥಳೀಯರು ಈ ಟಗರು ಕಾಳಗ ಏರ್ಪಡಿಸಿದ್ದ ಆಯೋಜಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

                  Advertisement

Like our news?
Copyrights

.