ತಂಗಿಯ SSLC ಪರೀಕ್ಷೆಗೆ ಕಾಪಿ ಚೀಟಿ ನೀಡಲು ಹೋಗಿದ್ದ ಯುವಕ ಸಾವು ; ಪೋಲೀಸರ ಮೇಲೆ ಪೋಷಕರ ಆಕ್ರೋಶ..!

Sat, Jun 27, 2020

ವಿಜಯಪುರ : ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ  ಸಾವಿಗೀಡಾಗಿರುವ ಘಟನೆ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನಡೆದಿದೆ ,


ಹೌದು ಬಸವನ ಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ನಿವಾಸಿ ಸಾಗರ ಚಲವಾದಿ (19) ಮೃತ ಯುವಕನಾಗಿದ್ದು ಇಂದು ನಡೆದ ಗಣಿತ ಪರೀಕ್ಷೆಗೆ ತಂಗಿಯನ್ನು ಬಿಡಲು ಹೂವಿನ ಹಿಪ್ಪರಗಿಯಲ್ಲಿನ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಯುವಕ ಬೇರೆ ಯುವಕರು ಕಾಪಿ ಚೀಟಿ ಕೊಡುವುದನ್ನು ನೋಡಿ ತಾನು ಸಹ ಮುಂದಾಗಿದ್ದಾನೆ ನಂತರ ಪೋಲೀಸರು ಈ ಯುವಕರ ಗುಂಪನ್ನು ಚದುರಿಸಲು ಲಾಟಿ ರುಚಿ ತೋರಿಸುವ ಸಮಯದಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ ,


ಇನ್ನೂ ಯುವಕನ ಪೋಷಕರು ಮತ್ತು ಸ್ಥಳಿಯರು ಪೋಲೀಸರ ಲಾಟಿ ಏಟಿಗೆ ಹೆದರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.Like our news?
Copyrights

.