ರಾಜ್ಯದಲ್ಲಿ ಇಂದು ಒಂದೇ ದಿನ 12 ಜನ ದುರ್ಮರಣ ; 210 ಜನರಿಗೆ ಸೋಂಕು ದೃಡ...!

Thu, Jun 18, 2020

ಬೆಂಗಳೂರು : ಇಂದು ರಾಜ್ಯದಲ್ಲಿ 12 ಜನ ಸಾವನ್ನಪ್ಪಿದ್ದು 210 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 7944 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.

ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ಬಳ್ಳಾರಿ 48, ಕಲಬುರಗಿ 48,  ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ್ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3,  ಚಿಕ್ಕಮಗಳೂರು 3, ವಿಜಯಪುರ 2, ಉತ್ತರ ಕನ್ನಡ 2, ಮೈಸೂರು 2, ಬಾಗಲಕೋಟೆ 1, ಶಿವಮೊಗ್ಗ 1, ಕೊಪ್ಪಳ 1 ಜನರಲ್ಲಿ ಸೋಂಕು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ 4983 ಜನ ಕೋವಿಡ್ ನಿಂದ ಗುಣಮುಖರಾಗಿದ್ದು  ಒಟ್ಟು 114 ಜನ ಸಾವನ್ನಪ್ಪಿದ್ದಾರೆ.

              ಜಿಲ್ಲಾವಾರು ಮಾಹಿತಿ...             

Like our news?