ಬ್ಯಾಂಕ್ ಸಾಲಗಾರರಿಗೆ RBI ನಿಂದ ಗುಡ್ ನ್ಯೂಸ್ ; ಮತ್ತೆ 3 ತಿಂಗಳ EMI ಮುಂದುಡಿದ RBI..! #RBI #Bank #India #Karnataka #EMI...

Fri, May 22, 2020


ದೆಹಲಿ : ಹೆಮ್ಮಾರಿ ಕೋವಿಡ್ -19 ವೈರಸ್ ಹಾವಳಿಯಿಂದಾಗಿ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಾರರಿಗೆ ಮತ್ತೆ ಜೂನ್ ನಿಂದ - ಆಗಸ್ಟವರಗೆ ಮೂರು ತಿಂಗಳ EMI ಪಾವತಿಸಲು ಬಿಗ್ ರಿಲೀಫ್ ನೀಡಿದೆ.


ಹೌದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಜನರ ಜೀವನ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ದೇಶದಲ್ಲಿ ರೆಪೋ ದರ ಶೇ.4 ನಿಂದ 4.4 ಕ್ಕೆ ಇಳಿಸಿ ರೆಪೊ ದರದಲ್ಲಿಯ 40 ಬೇಸಿಸ್ ಪಾಯಿಂಟ್ ಗೆ ಕಡಿತಗೊಳಿಸಿದ್ದು ರಿವರ್ಸ್ ರೆ-ದರವನ್ನು ಶೇ 3.35 ಕ್ಕೆ ಇಳಿಸಿದೆ, ಸಾಲದ ಅವಧಿಯ ಮರುಪಾವತಿಸಲು 3 ತಿಂಗಳ ಇಎಂಐ ಅನ್ನು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

EMI ಗಳನ್ನು ಪಾವತಿಸಲು ಮತ್ತೆ ಮೂರು ತಿಂಗಳ ವಿನಾಯಿತಿ ನೀಡಲಾಗಿದ್ದು ಜೂನ್ ತಿಂಗಳಿಂದ ಆಗಸ್ಟ್ ವರೆಗೆ ಪಾವತಿಸಲು ಅಗತ್ಯವಿಲ್ಲ ಎಂದು ತಿಳಿಸಿದರು ದೇಶದಲ್ಲಿರುವ ಜನರಿಗೆ ಕೋವಿಡ್ ನಿಂದ ಜನರು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಗೃಹ ಸಾಲದ ಮೇಲೆ ಬಡ್ಡಿದರವನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ  .

ಇನ್ನೂ ಕ್ರೆಡಿಟ್ ಕಾರ್ಡ್ ಗೆ ಈ ವಿನಾಯಿತಿ  ಅನ್ವಯವಾಗುವುದಿಲ್ಲ. ಆದರೆ  ಎಲ್ಲಾ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲಕ್ಕೆ ಇದು ಅನ್ವಯವಾಗಲಿದೆ...

Like our news?
Copyrights