ವಿಜಯಪುರದಲ್ಲಿ ಅಬಕಾರಿ ದಾಳಿ ; ಆರೋಪಿ ಸಮೇತ 55 ಸಾವಿರ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ...! #Vijayapur #Ganja #seller #accuse #arrested

Thu, May 21, 2020

ವಿಜಯಪುರ : ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ಸಮೇತ ಅಂದಾಜು 55 ಸಾವಿರ ರೂಪಾಯಿ ಮೌಲ್ಯದ 960 ಗ್ರಾಮ್ ಗಾಂಜಾ ವಶಕ್ಕೆ ಪಡೆದಿದ್ದಾರೆ.


ಹೌದು ಚಿಕ್ಕರುಗಿಯ ಹಿಟ್ಟನಹಳ್ಳಿ ರಸ್ತೆಯ ಕೆನಾಲ್ ಬ್ರಿಡ್ಜ್ ರಸ್ತೆಯಲ್ಲಿ ಅಕ್ರಮವಾಗಿ ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದ 960 ಗ್ರಾಮ್ ಗಾಂಜಾ ಹಾಗೂ ದ್ವಿಚಕ್ರ ವಾಹನವನ್ನು ಜಪ್ತು ಮಾಡಿದ್ದಾರೆ.


ಅಕ್ರಮವಾಗಿ ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದ ಗುರುಸಂಗಪ್ಪ ನೀಲಪ್ಪ ನಾಯಕವಾಡಿ(ತಳವಾರ )ನನ್ನು ಬಂಧಿಸಿ, ಅಂದಾಜು 55000 ರೂಪಾಯಿ ಮೌಲ್ಯದ 960 ಗ್ರಾಮ್ ವಶಕ್ಕೆ ಪಡೆದು ಗುರುಸಂಗಪ್ಪ ನಾಯ್ಕ್ ವಾಡಿ ವಿರುದ್ದ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Like our news?
Copyrights