ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ವಿಜಯಪುರ ಬಸ್ ನಿಲ್ದಾಣದ ಸಹಾಯಕ ಸಂಚಾರಿ ವ್ಯವಸ್ಥಾಪಕ...! #Vijayapur KSRTC #ACB #Raid

Wed, May 20, 2020

ವಿಜಯಪುರ : ಕೇಂದ್ರಬಸ್ ನಿಲ್ದಾಣ ಆವರಣದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗೆ ಸಂಬಂಧಪಟ್ಟಂತೆ 20 ಸಾವಿರ  ರೂ.ಗಳ ಬೇಡಿಕೆ ಇಟ್ಟು ಸಹಾಯಕ ವ್ಯವಸ್ಥಾಪಕನ್ನು ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.


ಹೌದು 10 ಸಾವಿರ ರೂ.ಗಳ ಲಂಚ ಸ್ವೀಕರಿಸುವ ಕುರಿತಂತೆ ಫೀರ್ಯಾದಿದಾರರ ದೂರಿನ ಆಧಾರದ ಮೇಲೆ ಸಹಾಯಕ ಸಂಚಾರ ವ್ಯವಸ್ಥಾಪಕ ಶ್ರೀ ರಾಜಶೇಖರ ಗಜಾಕೋಶ  ಹಣ ಸ್ವೀಕರಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ರೆಡ್‍ಹ್ಯಾಂಡ್ ಆಗಿ ಹಿಡಿದು, ಸದರಿಯವರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಈ.ಕ.ರಾ.ರ.ಸಾ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಿವ್ಹಿಲ್ ಇಂಜಿನಿಯರರಾದ ಶ್ರೀ ಸಂಗಣ್ಣ ರವರು ವಿದ್ಯುತ್ ಕೇಬಲ್ ಅಳವಡಿಸುವ ಕುರಿತು ಕೆ.ಎಸ್.ಆರ್.ಟಿ.ಸಿ ಆವರಣದ ಬಾವಿಯ ಬಳಿ ಹಡ್ಡಿದ್ದು, ಸದರಿ ಕಾಮಗಾರಿ ಬಗ್ಗೆ ತನ್ನ ಗಮನಕ್ಕೆ ಏಕೆ ತಂದಿರುವುದಿಲ್ಲ ಎಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕರಾದ ಶ್ರೀ ರಾಜಶೇಖರ ಎಸ್ ಗಜಾಕೋಶ, ಇವರು ವರದಿಯನ್ನು ಕಳುಹಿಸುವುದಾಗಿ ತಯಾರಿಟ್ಟುಕೊಂಡು ರೂ. 20,000/-ಕ್ಕೆ ಬೇಡಿಕೆಯನ್ನು ಇಟ್ಟು ಕೊನೆಗೆ ರೂ. 10,000/- ಅನ್ನು ಕೊಡಲು ಸೂಚಿಸಿರುತ್ತಾರೆ ಎಂದು ಪಿರ್ಯಾದಿದಾರರಾದ ಕೇಂದ್ರ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಶ್ರೀ ಪುಂಡಪ್ಪ ಧರ್ಮಣ್ಣ ರೆಡ್ಡಿ ಅವರು ಠಾಣೆಗೆ ದೂರನ್ನು   20-05-2020 ರಂದು ನೀಡಿದ ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಇಂದು ಸದರಿ ಆಪಾದಿತ ಸಹಾಯಕ ಸಂಚಾರ ವ್ಯವಸ್ಥಾಪಕರು ಶ್ರೀ ರಾಜಶೇಖರ ಎಸ್ ಗಜಾಕೋಶ ಲಂಚದ ಹಣವನ್ನು ಸ್ವೀಕರಿಸುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳ ಬಲೆ ಬೀಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ರಾಜಶೇಖರ್ ಗಜಾಕೋಶನನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ... 

Like our news?
Copyrights