ಕೇಂದ್ರದ ಹೊಸ ಮಾರ್ಗಸೂಚಿ ವಿಳಂಬ ಹಿನ್ನೆಲೆ ; ಮೇ 19 ರವರೆಗೆ ಯಥಾಸ್ಥಿತಿ ರಾಜ್ಯ ಆದೇಶ..! #Karnataka #Government #Bangalore..

Sun, May 17, 2020

ಬೆಂಗಳೂರು : ಲಾಕ್ ಡೌನ್ 3 ನೇಯ ಅವಧಿ ಇಂದು ಮುಕ್ತಾಯವಾಗುವ ಹಿನ್ನೆಲೆಯಲ್ಲಿ  ಕೇಂದ್ರದಿಂದ ಇಂದು ಹೊಸ ಮಾರ್ಗಸೂಚಿಗಳು ಬರಬೇಕಿತ್ತು ಕಾರಣಾಂತರಗಳಿಂದ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೆರಡು ದಿನ (ಮೇ19ರ ರಾತ್ರಿಯವರೆಗೆ) ಅಥವಾ ಮುಂದಿನ ಆದೇಶ ಬರುವವರೆಗೆ ಯಥಾಸ್ಥಿತಿ ಲಾಕ್ ಡೌನ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಇನ್ನೆರಡು ದಿನ ಆಥವಾ ಮುಂದಿನ ಆದೇಶ ಬರುವವರೆಗೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


Like our news?