BD1News.in ವಿಶೇಷ ವರದಿ...
ನಾನು ಯಾವತ್ತೂ ಪಬ್ಲಿಕ್ ಪೋಸ್ಟ್ ಮಾಡುವವಳಲ್ಲ. ಆದರೆ ಇವತ್ಯಾಕೋ ತುಂಬಾ ಹಪಹಪಿಕೆ... ಏನೋ ಒಂದು ತರಹದ ಬೇಜಾರು.
ವಿಷಯ ಏನೆಂದರೆ ಲೈಂಗಿಕ ದೌರ್ಜನ್ಯ ಕುರಿತು ನಾನು & ನನ್ನ ಆಪ್ತರೊಬ್ಬರು ವಿಚಾರಕ್ಕಿಳಿದೆವು. ಅದರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಹುಡುಗಿಯರ ಉಡುಗೆ-ತೊಡುಗೆ ಕಾರಣ ಎಂಬ ಅಂಶವಿತ್ತು.. ಪೋಷಕರಿಗೆ ಅವಳ ಮದುವೆ ಮಾಡುವವರೆಗೂ ಭಾರ ತೀರದು ಎಂಬ ಅಂಶಗಳು ಬಂದವು.. ಎಲ್ಲವೂ ಸರಿಯೇ ಒಪ್ಪಿಕೊಳ್ಳುವ ವಿಚಾರವೇ.
ಆದರೇ ಒಂದು ಪತ್ರಕರ್ತೆಯಾಗಿ ಯೋಚಿಸಿದಾಗ ನಾನು ಮನುವಿನ ಕಾಲದಲ್ಲಿ ಇದ್ದಂತೆ ಒಂದು ಕ್ಷಣ ಅನ್ನಿಸಿತು. ಆದರೆ ನನಗಂತು ವಿಷಯ ಏಕಮುಖಿ ಅನ್ನಿಸಿದಂತು ನಿಜ. ನನ್ನ ಮನಸ್ಸಿನಲ್ಲಿ ಮೂಡಿ ಬಂದ ಪ್ರಶ್ನೆಗಳಿಗೆ ನಾನೆ ಉತ್ತರ ಹುಡುಕಲು ಶುರುಮಾಡಿದೆ ಕಾರಣ ಅವರಿಂದ ಉತ್ತರ ಸಿಗಲಿಲ್ಲ...😊
1. ಇತಿಹಾಸ ಕೆದಕಿದರೆ ರಾಜರು, ಹೆಣ್ಣು ಮಕ್ಕಳು ಮೇಲಂಗಿ ಧರಿಸಿದರೆ ತೆರಿಗೆ ಕಟ್ಟುವ ಕಾಯಿದೆ ಹೇರಿದ್ದರು. ಬಡತನಕ್ಕೆ ಒಳಗಾಗಿ ತೆರಿಗೆ ಭರಿಸದೆ ಹಾಗೆ ಓಡಾಡುತ್ತಿದ್ದರು ಹೆಣ್ಣು ಮಕ್ಕಳು. ಆ ಕಾಲದಲ್ಲಿ ಈಗಿರುವಷ್ಟು ಲೈಂಗಿಕ ದೌರ್ಜನ್ಯ ಇರಲಿಲ್ಲ.
2. ಅನೇಕ ವಿಧವೆಯರು, ದೇವದಾಸಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು ಅವರೇನು Modern Dress ಹಾಕುತ್ತಿದ್ದರೇ? ಇಲ್ಲಾ ಸೀರೆಯನ್ನು ಧರಿಸುತ್ತಿದ್ದರು.....ಆದರೂ ದೌರ್ಜನ್ಯ ನಿಂತ್ತಿತ್ತೆ ಇಲ್ಲ.
3.ಈಗಿನ ಕಾಲಕ್ಕೆ ಬರೋಣ ಅದೆಷ್ಟೋ ಹಳ್ಳಿಗಳಲ್ಲಿ ಬಡ ಹೆಣ್ಣು ಮಕ್ಕಳಿಗೆ modern dress ಗಂಧಗಾಳಿಯೇ ಗೊತ್ತಿಲ್ಲ.... ಅನೇಕ ಅನಾಥ ಆಶ್ರಮಗಳಲ್ಲಿ ಕೊಡುವ & ತೊಡುವ ಬಟ್ಟೆ ಸಾಂಪ್ರದಾಯಿಕ ಮೈ ಮುಚ್ಚಿದ ಅಂಗಿಗಳೇ ಆಗಿರುತ್ತದೆ... ಆದರೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿ ನಡೆಯುವುದು ಇಂಥವರ ಮೇಲೆ.
4. ಇನ್ನು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಉಡುಗೆ ಕಾರಣ ಎನ್ನಲಾದೀತೆ ? ನವಜಾತ ಶಿಶುಗಳ ಮೇಲೂ ಲೈಂಗಿಕ ಹಲ್ಲೆ , ಪಾಪ ಅವುಗಳಿಗೆ ಇದರ ಅರಿವು ಇರುವುದಿಲ್ಲ ಬಿಡಿ. ಅಪ್ರಾಪ್ತ ಯುವತಿಯರ ಮೇಲೆ ಅತ್ಯಾಚಾರವಾಗುವುದೂ ಈಗೀಗ ಅಧಿಕವಾಗಿದೆ.
ಲೈಂಗಿಕ ಶೋಷಣೆಗೆ ಹೆಣ್ಣಿನ ಉಡುಗೆ - ತೊಡುಗೆಯೇ ಕಾರಣ ಎಂಬುದನ್ನೇ ಮೂಲಮಂತ್ರವಾಗಿಸಿರುವ ಬು(ಲ)ದ್ದಿ ಜೀವಿಗಳು ತಮ್ಮ ನಿಕೃಷ್ಷ ಪರಿಧಿಯ ಹೊರತಾಗಿ ಯೋಚಿಸಬೇಕಾದ ಹಲವು ಸಮಸ್ಯೆಗಳ ಆಯಾಮಗಳಿವೆ.
ಉಡುಗೆಯೊಂದು ಕಾರಣ ಎಂಬುದು ಕೆಲವರ ಆರೋಪವಷ್ಟೆ... ಲೈಂಗಿಕ ಶೋಷಣೆಯ ಅಪರಾಧಿ ಮಾಧ್ಯಮ ಉಡುಗೆಯಲ್ಲ.. ಪೋಷಕರು ಗಂಡು ಹೆಣ್ಣು ಮಕ್ಕಳಿರ್ವರಿಗೂ ಸಂಸ್ಕೃತಿಯ ಪಾಠ ಹೇಳುವ ಕಾರ್ಯ ನಿರ್ವಹಿಸಬೇಕು.
ಉಡುಗೆ-ಉಡಾಳಿಕೆಯ ಸಂಸ್ಕೃತಿಯ ಕಡಿವಾಣ ಇರ್ವರಿಗೂ ಅನ್ವಯವಾಗಬೇಕು. ಹೊರ ಉಡುಗೆ ಮೇಲೆ ನಿಯಂತ್ರಣ ಹೆಣ್ಣಿಗೆ ಮುಖ್ಯ ಎನ್ನುವ ಸಮಾಜ ಗಂಡಿಗೂ ಸಂವೇಧನಾ ಸಂಸ್ಕೃತಿ ನಿಯಂತ್ರಣದ ಪಾಠವನ್ನು ಇನ್ಮುಂದೆಯಾದರು ಕಲಿಸಬೇಕು.
ವಿಶ್ವ ಸಂಸ್ಥೆ " BE BOLD FOR CHANGE" ಎಂಬ ಧ್ಯೇಯವನ್ನು ಹೆಣ್ಣು ಮಕ್ಕಳಲ್ಲಿ ಉತ್ತೇಜಕವಾಗಿ ಪಸರಿಸಿ ಮಹಿಳಾ ಸ್ವಾವಲಂಬನೆಗೆ ಒತ್ತು ನೀಡುತ್ತಿದೆ.. ಮಹಿಳೆ ಸಮರ್ಥಳಾಗಲು SELF DIFENCE ಕೋರ್ಸ್ ಮುಂತಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ತೊಡಗಿ ಸಬಲರಾಗಬೇಕು. ಅದರ ಹೊರತು ಹೆಣ್ಣನ್ನು ಕುಗ್ಗಿಸುವ "ಮಾಧ್ಯಮ"ವಾಗಬೇಡಿ. ಕೇವಲ ಉಡುಗೆ ದೌರ್ಜನ್ಯಕ್ಕೆ ಕಾರಣವಲ್ಲ..
ನಮ್ಮಲ್ಲಿನ ಪೂರ್ವಗ್ರಹ ಪೀಡಿತ ಚಿಂತನೆಗಳಿಗೆ ಅಂತ್ಯ ಹೇಳಬೇಕಾದ. ಕಾರಣ ಹಿಂದಿನಂತೆ ಆಕೆ #ಹೆಣ್ಣು ಹೊನ್ನು ,ಮಣ್ಣು ಎಂಬ ಜೀವವಿಲ್ಲದ ವಸ್ತುಗಳ ಗುಂಪಿಗೆ ಸೇರಿದವಳಾಗಿ ಉಳಿದಿಲ್ಲ...... ಆಧುನಿಕ ಆದಿಶಕ್ತಿ ರೂಪಿಣಿ ಆಗುವ ಕಿಚ್ಚನ್ನು ಹೊಂದಿದ್ದಾಳೆ.. ಅವಳೇ ಸಮಯಕ್ಕೆ ತಕ್ಕಂತೆ ಶಾಂತ-ಸಂಹಾರೀ ಆಗಲು ನಾವು ಸಕಾರಾತ್ಮಕ ಅನುವು ಮಾಡಿಕೊಡಬೇಕಾಗಿದೆ.
ಬದಲಾವಣೆಗಾಗಿ ಬದಲಾವಣೆ ಅಗತ್ಯ..
ಲವೀನಾ ಸೋನ್ಸ್.... 🖋
HR of Brashta Darpana...
Sign up here to get the latest post directly to your inbox.