ಸಾವಿನಲ್ಲಿ ಒಂದಾದ ಭಗ್ನ ಪ್ರೇಮಿಗಳು ; ಸಾವಿನಲ್ಲೂ ಪರಸ್ಪರ ತಬ್ಬಿಕೊಂಡು ಆತ್ಮಹತ್ಯೆಗೆ ಶರಣು...! #Love #Failure #Vijayapur #Indi...

ವಿಜಯಪುರ : ಪ್ರೇಮಿಗಳು ಪರಸ್ಪರ ತಬ್ಬಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ.


ಹೌದು ಪರಸ್ಪರ ತಬ್ಬಿಕೊಂಡು ಆತ್ಮಹತ್ಯೆ ಮಾಡಿಕೊಂಡ ೨೧ ವಯಸ್ಸಿನ ಗಂಗಾಧರ ನಡಗಡ್ಡಿ, ೧೯ ವರ್ಷದ ರಕ್ಷಿತಾ ಶಿಂಗೆ ಮೃತ ಪ್ರೇಮಿಗಳಾಗಿದ್ದಾರೆ.


ಎರಡು ತಿಂಗಳ ಹಿಂದೆ ರಕ್ಷಿತಾ ಬೇರೊಬ್ಬನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು ಈ ಹಿನ್ನೆಲೆಯಲ್ಲಿ  ಮನನೊಂದು ಸಾವಿನಲ್ಲೂ ಒಂದಾಗಬೇಕೆಂದು ಪರಸ್ಪರ ತಬ್ಬಿಕೊಂಡೆ ಆತ್ಮಹತ್ಯೆಗೆ ಶರಣಾಗಿದ್ದಾರೆ

ಹನುಮಂತ ಶಿಂಗೆ ಎಂಬುವರ ಹೊಲದಲ್ಲಿರುವ ಬಾವಿಯಲ್ಲಿ ಶವಗಳು ಪತ್ತೆಯಾಗಿದ್ದು ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Like our news?
Copyrights

BD1 News Kannada

This is BD1 News which covers News of Every Village To Entire World