ಖಾಕಿ ಕಣ್ಗಾವಲಿಗೆ ವಿಜಯಪುರ ಲಾಕ್ ಡೌನ್ ; ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ ಸಂಪೂರ್ಣ ಬಂದ್..! #Vijayapur #LockDown #Successful #Karnataka...

ವಿಜಯಪುರ : ದೇಶವ್ಯಾಪಿ ಖಾಕಿ ಪರಿವೀಕ್ಷಣೆಯಲ್ಲಿ  ಲಾಕ್ ಡೌನ್ ಎರಡನೇ ದಿನ ಯಶಸ್ವಿಯಾಗಿ ಸಾಗಿದೆ, ಗುಮ್ಮಟನಗರಿ ವಿಜಯಪುರದಲ್ಲಿ ಕೂಡ ಖಾಕಿ ಬಂದೋಬಸ್ತ್ ಪರಿಣಾಮಕಾರಿಯಾಗಿದೆ.


ಹೌದು, ಆದೇಶ ಮೀರಿ ರಸ್ತೆಯಲ್ಲಿ ಅಲೆಯುತ್ತಿದ್ದ ಪುಂಡರಿಗೆ ಲಾಠಿ ರುಚಿ  ತೋರಿಸಿದ ನಂತರ ಅನಗತ್ಯವಾಗಿ ತಿರುಗುವರು ಲಾಟಿ ಏಟಿಗೆ ಹೆದರಿ ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ  ಇನ್ನೂ ಹಾಲಿನ ಡೈರಿ ದಿನಸಿ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಜಿಲ್ಲೆಯಲ್ಲಿ  ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ ಇನ್ನೂ ಕೆಲವು  ಬಡಾವಣೆಗಳಲ್ಲಿ ವಾಹನಗಳು ಬರದಂತೆ ಸ್ವಯಂ ಪ್ರೇರಿತ ಬ್ಯಾರಿ ಕೇಡ್ ಕಂಬಿಗಳನ್ನು ಹಾಕಿಕೊಂಡು ಜನರು ಕರೋನಾ ವಿರುದ್ಧ ಸಮರ ಸಾರಿದ್ದಾರೆ


ನಗರದ ಬಾರಾಕಮಾನ್ ಮಾರುಕಟ್ಟೆಯಲ್ಲಿ ಅವಶ್ಯಕ ಸಾಮಗ್ರಿಗಳು,ತರಕಾರಿ ಕೊಳ್ಳುವಾಗ ಜನ ಸೋಶಿಯಲ್ ಡಿಸ್ಟನ್ಸ್ ಮರೆತು ವ್ಯಾಪಾರ ಮಾಡಿ ಗಲಿಬಿಲಿ ವಾತಾವರಣ ಹೊರತು ಪಡಿಸಿ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಆಗಿದೆ...


Like our news?
Copyrights

BD1 News Kannada

This is BD1 News which covers News of Every Village To Entire World