ಬೀಜಿಂಗ್: ಕೊರೊನಾದಿಂದ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಚೀನಾದಲ್ಲಿ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಈ ವೈರಸ್ಗೆ ಅದಾಗಲೇ ಒಬ್ಬರು ಬಲಿಯಾಗಿದ್ದಾರೆ.ಇದೇ ವೈರಸ್ 32 ಜನರಲ್ಲಿ ಕಾಣಿಸಿಕೊಂಡಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಹ್ಯಾಂಟ ವೈರಸ್ ಸೋಂಕು ಮೊದಲಿಗೆ ದಂಶಕ (ಇಲಿ ಜಾತಿಯ ಪ್ರಾಣಿಗಳು) ಗಳಿಗೆ ತಗುಲುತ್ತದೆ. ಆದರೆ ಅವುಗಳಿಗೆ ಯಾವುದೇ ರೋಗ ಬರುವುದಿಲ್ಲ. ಆದರೆ ಈ ಪ್ರಾಣಿಗಳ ಮಲ, ಮೂತ್ರ, ಲಾಲಾರಸಗಳನ್ನು ಮನುಷ್ಯರು ಸ್ಪರ್ಷಿಸಿದಾಗ ಈ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಈ ರೋಗ ಲಕ್ಷಣಗಳು:
ಜ್ವರ, ತಲೆನೋವು, ಸ್ನಾಯುಗಳಲ್ಲಿ ನೋವು, ಹೊಟ್ಟೆನೋವು, ತಲೆತಿರುಗುವಿಕೆ, ಶೀತ ಮತ್ತು ವಾಕರಿಕೆ, ವಾಂತಿ, ಅತಿಸಾರದಂಥ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಂತರದ ದಿನಗಳಲ್ಲಿ ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಈ ವೇಳೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ..
Sign up here to get the latest post directly to your inbox.