ಗ್ರಾಹಕರ ಕೈಗೆಟುಕದ ದುಬಾರಿ ಬಂಗಾರ...#High#Gold Rate #...

Mon, Feb 03, 2020

ಚಿನ್ನಕ್ಕೆ ಭಾರತದಲ್ಲಿ ಬಲು ಬೇಡಿಕೆಯಿದೆ. ಅದರಲ್ಲೂ ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವುದು ವಾಡಿಕೆ.ಆದರೆ ಗಗನಕ್ಕೇರಿರುವ ಚಿನ್ನದ ದರ ಖರೀದಿದಾರರನ್ನು ಕಂಗೆಡಿಸಿದೆ.


ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ 40,000 ರೂಪಾಯಿ ಗಡಿ ದಾಟಿದ್ದು ನವದೆಹಲಿಯಲ್ಲಿ  10 ಗ್ರಾಂ ಚಿನ್ನದ ಬೆಲೆ 40,060 ರೂಪಾಯಿ ತಲುಪಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 38,410 ರೂಪಾಯಿಗಳಾಗಿದೆ.

ಬೆಳ್ಳಿ ಬೆಲೆಯೂ ಏರಿಕೆಯ ಹಾದಿ ಹಿಡಿದಿದ್ದು, ಕೆಜಿ ಬೆಳ್ಳಿ ಬೆಲೆ 49,990 ರೂಪಾಯಿಗಳಾಗಿದೆ. ವಿವಾಹ ಸೇರಿದಂತೆ ಶುಭ ಸಮಾರಂಭಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಬೆಲೆ ಏರಿಕೆ ಖರೀದಿದಾರರಿಗೆ ಚಿಂತೆಯನ್ನುಂಟು ಮಾಡಿದೆ..

Like our news?