ಎನ್‌ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ್ ಮೂಲತಃ ಹುಬ್ಬಳ್ಳಿಯವರು...! #Hyderabad #rape #murder #Encounter...

ಹೈದರಾಬಾದ್: ಇಡೀ ದೇಶವನ್ನೇ ಬೆಚ್ಚಿಬಿಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ, ಪೋಲೀಸರ ಎನಕೌಂಟರ್ಗಗೆ ಇಡೀ ದೇಶವೇ ಪೋಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ..


ಹೌದು ಎನಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರು ಮೂಲತಃ ಹುಬ್ಬಳ್ಳಿಯ ಪಗಣಿ ಓಣಿಯವರಾಗಿದ್ದು ವಿಶ್ವನಾಥ್ ಸಜ್ಜನರ್ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ವಿಶ್ವನಾಥ್ ಸಜ್ಜನರ್ ವಾರಂಗಲ್ ಎಸ್‍ಪಿ ಆಗಿದ್ದರು. ಆಗ ಆಸಿಡ್ ದಾಳಿ ಆರೋಪಿಗಳು ಎನ್‍ಕೌಂಟರ್ ನಲ್ಲಿ ಹತ್ಯೆಗೈದಿದ್ದರು. ಆ ಎನ್‍ಕೌಂಟರ್ ಬಳಿಕ ಆ್ಯಸಿಡ್ ದಾಳಿಯಲ್ಲಿ ಇಳಿಕೆ ಕಂಡಿತ್ತು.


ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಗುಂಡಿನ ದಾಳಿ ನಡೆಸಿ ಎನ್‍ಕೌಂಟರ್ ಮಾಡಿದ್ದಾರೆ.  

Like our news?
Copyrights

BD1 News Kannada

This is BD1 News which covers News of Every Village To Entire World