ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ...! #Karnataka #Vijayapur #Former #Suicide #Loan....

Tue, Dec 03, 2019

ವಿಜಯಪುರ: ಸಾಲ ಬಾಧೆಗೆ ಹೆದರಿ  ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ನಡೆದಿದೆ.

ಮುಳಸಾವಳಗಿ ಗ್ರಾಮದ ಹೊನಮಲ್ಲಪ್ಪ ಮಲಕಪ್ಪ ಉಕುಮನಾಳ (44) ಆತ್ಮಹತ್ಯೆ ಮಾಡಿಕೊಂಡ ರೈತ, ಉಳುಮೆಗಾಗಿ ಟ್ರ್ಯಾಕ್ಟರ್ ಖರೀದಿಸಿದ್ದ ಮತ್ತು ದೇವರಹಿಪ್ಪರಗಿ ಪಟ್ಟಣ ಸಹಕರಿ ಬ್ಯಾಂಕ್, ಕೆವಿಜಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಒಟ್ಟು 8 ಲಕ್ಷ ರೂ. ಸಾಲ ಮಾಡಿದ್ದ ಆದರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಕಮರಿ ಹೋಗಿದ್ದರಿಂದಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಆತಂಕಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ...

ದೇವರಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Like our news?
Copyrights

*