ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ; ಡಿ.15ರ ವರೆಗೆ ವಿಸ್ತರಣೆ...! #FastTag #Highway #Toll #Plaza...

Sat, Nov 30, 2019

ಸಾರ್ವಜನಿಕರು ಈ ಕುರಿತಂತೆ ಯಾವುದೇ ಗೊಂದಲಗಳು ಇದ್ದರೆ ಉಚಿತ ದೂರವಾಣಿ ಸಂಖ್ಯೆ1033ಕ್ಕೆ ಸಂಪರ್ಕಿಸಬಹುದು...

ಹೊಸದಿಲ್ಲಿ: ದೇಶದಲ್ಲಿ ಜಾರಿಯಾಗಲಿರುವ ಆನ್ ಲೈನ್ ಟೋಲ್ ಪಾವತಿ ವ್ಯವಸ್ಥೆ ಫಾಸ್ಟ್‌ಟ್ಯಾಗ್‌ ಯೋಜನೆಯನ್ನು ಡಿಸೆಂಬರ್ 15ರ ವರೆಗೆ  ಕೇಂದ್ರ ಸರಕಾರ  ವಿಸ್ತರಿಸಿದೆ....


ಹೌದು ಈ ಹಿಂದೆ ಡಿಸೆಂಬರ್ 1ರಂದು ಕಡ್ಡಾಯ ಎಂದು ತೀರ್ಮಾನಿಸಲಾಗಿತ್ತು. ಆದರೆ ಬೇಡಿಕೆಯಷ್ಟು ಫಾಸ್ಟ್‌ಟ್ಯಾಗ್‌ ಗಳು ವಿತರಣೆಯಾಗದೇ ಇದ್ದ ಕಾರಣ ಮತ್ತಷ್ಟು ಸಮಯವನ್ನು ನೀಡಲಾಗಿದೆ. ಕೆಲವು ಟೋಲ್ ಗಳಲ್ಲಿ ಸಾಕಷ್ಟು ಫಾಸ್ಟ್‌ಟ್ಯಾಗ್‌ ಗಳು ಇರದೇ ಇದ್ದ ಕಾರಣ ಜನರಿಗೆ ಕೊಂಡುಕೊಳ್ಳಲಾಗುತ್ತಿಲ್ಲ. ಈ ಕಾರಣವನ್ನು ಮನಗಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ನಿರ್ಧಾರವನ್ನು ಮುಂದೂಡಿದೆ. ಈಗಾಗಲೇ ಒಟ್ಟು 70 ಲಕ್ಷ ಫಾಸ್ಟ್‌ಟ್ಯಾಗ್‌ ಗಳನ್ನು ವಿತರಿಸಲಾಗಿದೆ. ನವೆಂಬರ್ 26ರಂದು ದಾಖಲೆಯ 1,35,583 ಫಾಸ್ಟ್‌ಟ್ಯಾಗ್‌ ಗಳು ವಿತರಣೆಯಾಗಿದ್ದವು. 28ರಂದು 1.03 ಲಕ್ಷ ಫಾಸ್ಟ್‌ಟ್ಯಾಗ್‌ ಗಳು ವಿತರಣೆಯಾಗಿದ್ದವು...

Like our news?
Copyrights

*